Advertisement

Kollywood: ಸೂರ್ಯ – ಕಾರ್ತಿಕ್‌ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್‌ ಫಿಕ್ಸ್

07:28 PM Jan 08, 2025 | Team Udayavani |

ಚೆನ್ನೈ: ʼಕಂಗುವʼ ಬಳಿಕ ನಟ ಸೂರ್ಯ (Actor Suriya) ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾರ್ತಿಕ್‌ ಸುಬ್ಬರಾಜ್‌ (Karthik Subbaraj) ಜತೆಗಿನ ʼರೆಟ್ರೋʼ (Retro) ಆ ದೊಡ್ಡ ಗೆಲುವು ತಂದುಕೊಡುತ್ತದೆ ಎನ್ನುವ ಮಾತುಗಳು ಕಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

Advertisement

ನಟ ಸೂರ್ಯ ಮಾಸ್‌ & ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್‌ ಕಂ ಆ್ಯಕ್ಷನ್ ಕಥೆ ʼರೆಟ್ರೋʼ ಇತ್ತೀಚೆಗೆ ಟೀಸರ್‌ ರಿಲೀಸ್‌ ಮಾಡಿ ಸದ್ದು ಮಾಡಿತ್ತು.

ದೇವಸ್ಥಾನವೊಂದರ ಮುಂದೆ ನಾಯಕಿ – ನಾಯಕಿ (ಸೂರ್ಯ – ಪೂಜಾ ಹೆಗ್ಡೆ) ʼಕೋಪವನ್ನು ಕಮ್ಮಿ ಮಾಡಿಕೊಳ್ಳುತ್ತೇನೆ. ನನ್ನ ತಂದೆ ಜತೆ ಮಾಡುತ್ತಿರುವ ಕೆಲಸವನ್ನು ಬಿಡುತ್ತೇನೆ. ರೌಡಿಸಂ, ಹಿಂಸೆ, ಹೊಡೆದಾಟ ಎಲ್ಲವನ್ನು ಈ ಕ್ಷಣದಿಂದಲೇ ಬಿಡುತ್ತೇನೆ. ನಾವು ನಗು ಹಾಗೂ ಸಂತೋಷದಿಂದ ಇರಲು ಪ್ರಯತ್ನಿಸುವ ಎಂದು ಹೇಳಿ ಮದುವೆ ಪ್ರಸ್ತಾಪವನ್ನು ಮಾಡುವ ದೃಶ್ಯವನ್ನು ಟೀಸರ್‌ ನಲ್ಲಿ ತೋರಿಸಲಾಗಿತ್ತು.

ಟೀಸರ್‌ ನೋಡಿದಾಗ ಇದೊಂದು ಹೈಆಕ್ಟೇನ್‌ ಆ್ಯಕ್ಷನ್ ಸಿನಿಮಾವೆನ್ನುವುದು ಗೊತ್ತಾಗುತ್ತದೆ. ಇದೀಗ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

Advertisement

ಈ ವರ್ಷದ ಮೇ 1 ರಂದು ʼರೆಟ್ರೋʼ ಚಿತ್ರ ರಿಲೀಸ್‌ ಆಗಲಿದೆ ಎಂದು ಪೋಸ್ಟರ್‌ವೊಂದರ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ರಿಲೀಸ್‌ ಡೇಟ್‌ ಕೇಳಿ ಸೂರ್ಯ ಫ್ಯಾನ್ಸ್‌ಗಳು ಕೇಳಿ ಥ್ರಿಲ್‌ ಆಗಿದ್ದಾರೆ.

ಚಿತ್ರದಲ್ಲಿ ಸೂರ್ಯ , ಪೂಜಾ ಅವರಲ್ಲದೆ ಜಯರಾಮ್, ಜೋಜು ಜಾರ್ಜ್, ಕರುಣಾಕರನ್, ನಾಸರ್, ಪ್ರಕಾಶ್ ರಾಜ್, ಸುಜಿತ್ ಶಂಕರ್, ಪ್ರೇಮ್ ಕುಮಾರ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next