Advertisement

ಸೀಮಾ ಹೈದರ್‌ ಸಿನಿಮಾ ನಿಲ್ಲಿಸಿ: ತಂಡಕ್ಕೆ MNS ಎಚ್ಚರಿಕೆ

08:03 PM Aug 13, 2023 | Team Udayavani |

ಮುಂಬೈ: ಪಬ್ಜಿ ಮೂಲಕ ಪರಿಚಿತನಾದ ವ್ಯಕ್ತಿಯ ಜತೆಗೆ ಪ್ರೇಮಾಂಕುರವಾಗಿ ಪಾಕಿಸ್ತಾನದಿಂದ ಬಂದು ಭಾರತದಲ್ಲಿ ನೆಲೆಸಿ ಸುದ್ದಿಯಾಗಿರುವ ಸೀಮಾ ಹೈದರ್‌ ಅವರ ಪ್ರೇಮಕಥೆಯನ್ನು ಆಧಾರವಾಗಿಟ್ಟುಕೊಂಡು ಮಾಡಲು ಹೊರಟಿರುವ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸುವಂತೆ ರಾಜ್‌ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ಪಟ್ಟು ಹಿಡಿದಿದೆ. ಅಲ್ಲದೇ, ಈ ಡ್ರಾಮಾವನ್ನು ನಿಲ್ಲಿಸದೇ ಇದ್ದರೆ ಪರಿಣಾಮ ಎದುರಿಸಲು ಸಿದ್ದರಾಗಿರಿ ಎಂದೂ ಎಚ್ಚರಿಕೆ ನೀಡಲಾಗಿದೆ.

Advertisement

ಈಗಾಗಲೇ ಸೀಮಾ ಪಾಕಿಸ್ತಾನ ಗುಪ್ತಚರ ಏಜೆಂಟ್‌ ಎನ್ನುವಂಥ ವದಂತಿಗಳೂ ಇದ್ದು, ಹಲವಾರು ಸಂಘಟನೆಗಳು ಆಕೆಯನ್ನು ಪಾಕ್‌ಗೆ ಗಡಿಪಾರು ಮಾಡುವಂತೆ ತಾಕೀತು ಮಾಡುತ್ತಿವೆ. ಅದರ ನಡುವೆ ನೋಯ್ಡಾ ಮೂಲದ ಅಮಿತ್‌ ಜೈನ್‌ ಎನ್ನುವ ನಿರ್ಮಾಪಕ ಸೀಮಾ ಹಾಗೂ ಭಾರತದ ಸಚಿನ್‌ ಅವರ ಪ್ರೇಮಕಥೆಯನ್ನು ಜಗತ್ತಿಗೆ ತಿಳಿಸಲು, ಆಕೆಯನ್ನೇ ಸಿನಿಮಾದಲ್ಲಿ ಅಭಿನಯಿಸುವಂತೆ ಕೋರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎನ್‌ಎಸ್‌ ಆಕ್ಷೇಪ ವ್ಯಕ್ತ ಪಡಿಸಿ, ಭಾರತ ಚಿತ್ರರಂಗದಲ್ಲಿ ಪಾಕಿಸ್ತಾನಿಗಳಿಗೆ ಜಾಗವಿಲ್ಲ. ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ ಎಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next