Advertisement
ಮಯ್ಮನಾ-ಅಖೀನಾ, ಹೈರತಾನ್ -ಕಾಬೂಲ್-ತೋಖಾಂ ಸೇರಿದಂತೆ ಹಲವು ಹೆದ್ದಾರಿಗಳ ಮೇಲೆ ಅಫ್ಘಾನಿಸ್ತಾನ ಸೇನೆ ಬಿಗಿ ಕಾವಲು ನೀಡುತ್ತಿದೆ. ಇದರ ಜತೆಗೆ ಹಲವು ಗ್ರಾಮಗಳಿಂದಲೂ ಕೂಡ ಉಗ್ರರನ್ನು ಹೊಡೆದಟ್ಟಲಾಗಿದೆ. ಜತೆಗೆ ಹಲವು ಸುಧಾರಿತ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಪ್ರಾಂತ್ಯದಲ್ಲಿ ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿರುವ ಸಲ್ಮಾ ಡ್ಯಾಮ್ ಅನ್ನು ಸ್ಫೋಟಿಸಲು ತಾಲಿಬಾನ್ ಉಗ್ರರು ಯತ್ನಿಸಿದ್ದಾರೆ. ಆದರೆ, ಆ ಪ್ರಯತ್ನಕ್ಕೆ ಸೋಲಾಗಿದೆ. ಈ ಸಂದರ್ಭದಲ್ಲಿ ನಡೆದ ಕಾಳಗದಲ್ಲಿ ಐವರು ತಾಲಿಬಾನಿಗಳು ಕೊಲ್ಲಲ್ಪಟ್ಟಿದ್ದಾರೆ. ಮಜಾರ್- ಇ-ಷರೀಫ್, ಜಲಾಲಾಬಾದ್, ಕಂದಹಾರ್ ನಗರ, ಹೆರಾತ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. 200 ಮಂದಿ ಆಗಮನ: ಅಫ್ಘಾನಿಸ್ತಾನದಲ್ಲಿ ಅಮೆರಿಕದದ ಪರವಾಗಿ ಕೆಲಸ ಮಾಡುತ್ತಿದ್ದವರ ಪೈಕಿ 221 ಮಂದಿಯನ್ನು ವಾಷಿಂಗ್ಟನ್‌ಗೆ ಮೊದಲ ಹಂತದಲ್ಲಿ ಕರೆತರಲಾಗಿದೆ. ಈ ಪೈಕಿ 57 ಮಂದಿ ಮಕ್ಕಳು ಮತ್ತು15 ಮಂದಿ ಶಿಶುಗಳು ಸೇರಿವೆ.
Related Articles
Advertisement
ಟ್ರಂಪ್ ಮಾದರಿ ಗೋಡೆಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ ನಿರಾಶ್ರಿತರು ದೇಶ ಪ್ರವೇಶಿಸದಂತೆ ಗಡಿಯಲ್ಲಿ ಗೋಡೆ ನಿರ್ಮಿಸಲು ಯೋಜಿಸಿದ್ದರು. ಅದೇ ಮಾದರಿಯನ್ನು ಟರ್ಕಿ ಅಧ್ಯಕ್ಷ ರೀಪ್ ತಯ್ಯಪ್ ಎರ್ಡೊಗನ್ ಅನುಸರಿಸಲು ತೀರ್ಮಾನಿಸಿದ್ದಾರೆ. ಇರಾನ್ ಮತ್ತು ಅಫ್ಘಾನಿಸ್ತಾನ ನಡುವೆ 300ಕಿಮೀ ದೂರ ಗಡಿ ಪ್ರದೇಶವನ್ನು ಟರ್ಕಿ ಹೊಂದಿದೆ. 2017 ರಿಂದಲೇ ನಡೆಯುತ್ತಿರುವ ಕಾಮಗಾರಿಯನ್ನು ಪರಿಸ್ಥಿತಿ ಹಿನ್ನೆಲೆಯಲ್ಲಿ ಚುರುಕುಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಘ್ಘಾನ್ ನಿರಾಶ್ರಿತರು ಟರ್ಕಿಗೆ ಪ್ರವೇಶಿಸದಂತೆ ಈ ಗೋಡೆ ನೆರವಾಗಲಿದೆ ಎನ್ನುವುದು ಅಲ್ಲಿನ ಸರ್ಕಾರದ ಅಂಬೋಣ.