Advertisement

Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ

10:26 AM Jan 03, 2025 | Team Udayavani |

ನವದೆಹಲಿ: ಉತ್ತರ ಭಾರತದ ವಿವಿಧ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿರುವ ಪರಿಣಾಮ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆ ಆರ್ಭಟ ಹೆಚ್ಚಾಗಿದ್ದು, ಸುತ್ತಮುತ್ತಲ ಪ್ರದೇಶಗಳು ತೀವ್ರ ಚಳಿಯಿಂದ ಕೂಡಿದ್ದು ಜೊತೆಗೆ ದಟ್ಟ ಮಂಜಿನಿಂದ ಆವೃತಗೊಂಡಿದೆ ಇದರಿಂದ ಶೂನ್ಯ ಗೋಚರತೆ ಎದುರಾಗಿದ್ದು ವಾಹನ ಸಂಚಾರ, ರೈಲು, ವಿಮಾನ ಸಂಚಾರಗಳ ಮೇಲೆ ಪರಿಣಾಮ ಬೀರಿದೆ.

Advertisement

ದಟ್ಟವಾದ ಮಂಜು ಪ್ರದೇಶವನ್ನು ಆವರಿಸಿದ್ದು ಇದರಿಂದ ತಾಪಮಾನವು ಮತ್ತಷ್ಟು ಕುಸಿಯುತ್ತಿದೆ. ದೆಹಲಿಯಲ್ಲಿ, ಶುಕ್ರವಾರ ಬೆಳಿಗ್ಗೆ ಕನಿಷ್ಠ ತಾಪಮಾನವು 9.6 ° C ಇದ್ದು ಇದು ಸತತ ಐದನೇ ದಿನಕ್ಕೆ ಮುಂದುವರೆದಿದ್ದು ಇದರಿಂದ ಜನರ ದೈನಂದಿನ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ.

ವಿಮಾನ, ರೈಲು ಸಂಚಾರಗಳ ಮೇಲೆ ಪರಿಣಾಮ:
ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಕುಸಿದರೆ, ಸಫ್ದರ್‌ಜಂಗ್ ವಿಮಾನ ನಿಲ್ದಾಣವು 50 ಮೀಟರ್ ಗೋಚರತೆಯನ್ನು ವರದಿ ಮಾಡಿದೆ. ಪರಿಣಾಮ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು ಹಾಗಾಗಿ ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಿದೆ.

ರೈಲು ಸಂಚಾರದಲ್ಲೂ ಸಮಯ ವ್ಯತ್ಯಯವಾಗುವ ಸಂಭವವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಶೂನ್ಯ ಗೋಚರತೆ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ವಿಳಂಬವಾಗಲಿದೆ ಜೊತೆಗೆ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ದಟ್ಟ ಮಂಜಿನ ಪರಿಸ್ಥಿತಿಗಳಿಂದಾಗಿ ದೆಹಲಿಯಿಂದ ಹೊರಡುವ ಕನಿಷ್ಠ 24 ರೈಲುಗಳ ಸಂಚಾರದಲ್ಲಿ ವಿಳಂಬವಾಗಿವೆ. ಅಯೋಧ್ಯೆ ಎಕ್ಸ್‌ಪ್ರೆಸ್ ರೈಲು ನಾಲ್ಕು ಗಂಟೆ ವಿಳಂಬವಾಗಿ ಸಂಚಾರ ನಡೆಸಲಿದೆ, ಗೋರಖ್‌ಧಾಮ್ ಎಕ್ಸ್‌ಪ್ರೆಸ್ ಎರಡು ಗಂಟೆ ತಡವಾಗಿ ಒಡಲಿದೆ ಮತ್ತು ಬಿಹಾರ ಕ್ರಾಂತಿ ಎಕ್ಸ್‌ಪ್ರೆಸ್ ಮತ್ತು ಶ್ರಮ ಶಕ್ತಿ ಎಕ್ಸ್‌ಪ್ರೆಸ್ ಮೂರು ಗಂಟೆಗಳಿಗೂ ಹೆಚ್ಚು ವಿಳಂಬವಾಗಿ ಸಂಚರಿಸಲಿದೆ.

Advertisement

ಇದನ್ನೂ ಓದಿ: Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next