Advertisement

ಅಂಬಿ ಸಾವನ್ನೂ ಎಳೆತಂದ ರೇವಣ್ಣ : ಸುಮಲತಾ ಕುರಿತ ಹೇಳಿಕೆಗೆ ಆಕ್ರೋಶ

12:30 AM Mar 09, 2019 | Team Udayavani |

ಬೆಂಗಳೂರು: “ಗಂಡ ತೀರಿಹೋಗಿ ತಿಂಗಳಾಗಿಲ್ಲ, ಆಗಲೇ ರಾಜಕೀಯಕ್ಕೆ ಬಂದಿದ್ದಾರೆ” ಎಂಬ ಸುಮಲತಾ ಕುರಿತ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣಅವರ ಹೇಳಿಕೆ ಭಾರೀ ವಿವಾ ದ ಸೃಷ್ಟಿಸಿದೆ. ಪ್ರತಿಪಕ್ಷ ಬಿಜೆಪಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೇವಣ್ಣ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದರೆ, ಪ್ರಚೋದನಕಾರಿ ಹೇಳಿಕೆ ನೀಡಿ, ನನ್ನಿಂದ ಬೇರೆ ಯದೇ ಮಾತು ಗಳನ್ನಾಡಿಸುವ ಯಾರ ಯತ್ನವೂ ಸಫಲವಾಗುವುದಿಲ್ಲ. ನನ್ನ ಆತ್ಮ ಸ್ಥೈರ್ಯ ಕುಗ್ಗಿ ಸಲೂ ಆಗುವುದಿಲ್ಲ ಎಂದು ಅಂಬಿ ಪತ್ನಿ ಸುಮಲತಾ ತಿರುಗೇಟು ನೀಡಿದ್ದಾರೆ.

Advertisement

ಬಿಜೆಪಿ ಆಕ್ಷೇಪ: ರೇವಣ್ಣ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವ ಸುರೇಶ್‌ ಕುಮಾರ್‌ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಅಂತಾರಾಷ್ಟ್ರೀಯ ಮಹಿಳಾದಿನದಂದೇ ಜವಾಬ್ದಾರಿ ಸಚಿವರೊಬ್ಬರು ಈರೀತಿ ಯ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಇಂದಿನ ರಾಜಕಾರಣಿಗಳ ಹಾಗೂ ರಾಜಕೀಯ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಜನರಿಗೆ ಸಿನಿಮಾ ಟಿಕೆಟ್‌; ಕುಟುಂಬಕ್ಕೆ ಎಂಪಿ, ಎಂಎಲ್‌ಎ, ಎಂಎಲ್‌ಸಿ, ಜಿಪಂ ಟಿಕೆಟ್‌ ಎನ್ನುವ ಸಿದ್ಧಾಂತ  ದೇವೇಗೌಡರ ಕುಟುಂಬ ಹೊಂದಿದೆ. ಸಚಿವ ರೇವಣ್ಣನವರ ಹೇಳಿಕೆ ಅತ್ಯಂತ ಸಣ್ಣ ಮನಸ್ಸಿನಿಂದ, ದ್ವೇಷದಿಂದ ಕೂಡಿದೆ. ಇವರ ಕುಟುಂಬ ಬಿಟ್ಟು ಬೇರೆ ಯಾರೂ ರಾಜಕೀಯವಾಗಿ ಬೆಳೆಯಬಾರದು, ಹೀಗಾಗಿ ಸುಮಲತಾ ಅಂಬರೀಶ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ರಾಜ್ಯ ಮಹಿಳೆಯರಿಗೆ ಅವಮಾನ ಮಾಡಿದಂತೆ. ಸಚಿವ ರೇವಣ್ಣ ಕೂಡಲೇ ಕ್ಷಮೆಯಾಚಿಸಬೇಕು ಎಂದು ರವಿಕುಮಾರ್‌ ಆಗ್ರಹಿಸಿದರು. ಜಾಲತಾಣಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಯಾಗಿದೆ.

ನಾವೆಲ್ಲಾ ಸಾಮಾಜಿಕ ಕ್ಷೇತ್ರದಲ್ಲಿರುವವರು. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಯಾವುದು, ಸರಿ, ತಪ್ಪು ಎಂಬ ತಿಳಿವಳಿಕೆಯಿಂದ ಮಾತನಾಡಬೇಕು.
●ಸುಮಲತಾ, ಅಂಬರೀಶ್‌ ಪತ್ನಿ

ರೇವಣ್ಣ ಹೇಳಿದ್ದೇನು?
ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಎಚ್‌.ಡಿ.ರೇವಣ್ಣ ಅವರು ಮಾಧ್ಯಮದವರ ಜತೆ ಮಾತನಾ ಡುತ್ತಾ, ಅಂಬರೀಷ್‌ ಅವರು ತೀರಿ ಹೋಗಿ ಇನ್ನೂ ಒಂದು ತಿಂಗಳಾಗಿಲ್ಲ,ಆಗಲೇ ಸುಮಲತಾ ಅವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಕುಮಾರಸ್ವಾಮಿ ಯವರು, ಅಂಬರೀಷ್‌ ನಿಧನರಾದಾಗ ಯಾವ ರೀತಿ ಕೆಲಸ ಮಾಡಿದರು ಎಂಬುದನ್ನೂ ಇವರು ತಿಳಿದುಕೊಳ್ಳ ಬೇಕಾಗುತ್ತದೆ ಎಂದು ಹೇಳಿದ್ದರು.

Advertisement

ಡೋಂಟ್‌ ಕೇರ್‌
ಅಂಬರೀಶ್‌ ಯಾರು ಏನೇ ಮಾತನಾಡಿದರೂ, ಡೋಂಟ್‌ ಕೇರ್‌ ಎನ್ನುತ್ತಿದ್ದರು. ನಾನು ಕೂಡ ಅಂಬರೀಶ್‌ ಮಾರ್ಗದರ್ಶನ ದಲ್ಲೇ ಹೋಗು ತ್ತೇನೆ. ಪ್ರಚೋ ದನ ಕಾರಿ ಹೇಳಿಕೆ ನೀಡಿ ನನ್ನಿಂದ ಬೇರೆ ಯದ್ದೇ ಮಾತುಗಳನ್ನಾಡಿಸಬಹುದು ಎಂಬ ಪ್ರಯತ್ನ ಯಾವುದೇ ಕಾರಣಕ್ಕೂ ಫಲ ನೀಡುವುದಿಲ್ಲ ಎಂದು ಸುಮಲತಾ
ಸ್ಪಷ್ಟಪಡಿಸಿದರು. ಮಹಿಳೆಯರ ಬಗ್ಗೆ ಕ್ಷುಲ್ಲಕ ಮಾತುಗಳು ಆಡಬಾರದು. ನಾನು ಈ ಬಗ್ಗೆ ಯಾವುದೇ ಪ್ರತಿ ಕ್ರಿ ಯೆ  ನೀಡುವುದಿಲ್ಲ. ಏನೇ ಮಾತನಾಡಿದರೂ ಜನಕ್ಕೆ ಸಂದೇಶ ರವಾನೆಯಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next