Advertisement

ನಾಳೆ ರಾಜ್ಯ ಜೆಡಿಯು ಸರ್ವ ಸದಸ್ಯರ ಸಭೆ

12:04 PM Dec 25, 2021 | Team Udayavani |

ದಾವಣಗೆರೆ: ರಾಜ್ಯ ಸಂಯುಕ್ತ ಜನತಾದಳದ ಸರ್ವ ಸದಸ್ಯರ ಸಭೆ ಡಿ. 26 ರಂದು ದಾವಣಗೆರೆಯ ಶೋವೆನ್‌ ಹೋಟೆಲ್‌ ಸಭಾಂಗಣದಲ್ಲಿ ನಡೆಯಲಿದೆ ಎಂದು ರೈತ ವಿಭಾಗದ ರಾಜ್ಯ ಅಧ್ಯಕ್ಷ ಬಿ.ಕೆ. ಶ್ರೀನಿವಾಸ್‌ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಂಯುಕ್ತ ಜನತಾದಳವನ್ನ ಹೆಚ್ಚಿನ ಮಟ್ಟದಲ್ಲಿ ಸಂಘಟಿಸಿ, ಸ್ವತ್ಛ ಕರ್ನಾಟಕ ನಿರ್ಮಾಣ, ಭ್ರಷ್ಟಾಚಾರರಹಿತ, ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದರು.

Advertisement

ಭಾನುವಾರ ಬೆಳಗ್ಗೆ 10.30ಕ್ಕೆ ಪಕ್ಷದ ರಾಜ್ಯ ಅಧ್ಯಕ್ಷ, ಮಾಜಿ ಶಾಸಕ ಮಹಿಮ ಜೆ. ಪಟೇಲ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಎಲ್ಲ ಜಿಲ್ಲೆಗಳ ಸಂಚಾಲಕರು, ವಿವಿಧ ಘಟಕಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಒಳಗೊಂಡಂತೆ 400-500 ಜನರು ಭಾಗವಹಿಸುವರು ಎಂದು ತಿಳಿಸಿದರು.

ರಾಜ್ಯ ಕಂಡಂತಹ ಮಹಾನ್‌ ಮುತ್ಸದ್ದಿಗಳು, ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್‌. ಪಟೇಲ್‌, ರಾಮಕೃಷ್ಣ ಹೆಗಡೆಯವರ ತತ್ವಾದರ್ಶ, ಸಿದ್ಧಾಂತಗಳ ನೆಲೆಯಲ್ಲಿ ಸಂಯುಕ್ತ ಜನತಾದಳ ಕೆಲಸ ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರಗಳ ಆಡಳಿತದಿಂದ ರೋಸಿ ಹೋಗಿರುವ ರಾಜ್ಯದ ಜನರು ಪರ್ಯಾಯ ಬಯಕೆ, ನಿರೀಕ್ಷೆಯಲ್ಲಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ಸಂಯುಕ್ತ ಜನತಾದಳ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ. ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪಕ್ಷ ಸಂಘಟನೆ, ಬಲವರ್ಧನೆಗೆ ಪ್ರಾಮಾಣಿಯ ಪ್ರಯತ್ನ ಮಾಡಲಿದೆ. ಅದರ ಮೊದಲ ಭಾಗವಾಗಿ ದಾವಣಗೆರೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯುತ್ತಿದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಸಂಚಾಲಕ ಮಂಜುನಾಥ ಸುಗ್ಗೇರ್‌ ಮಾತನಾಡಿ, ರಾಜ್ಯದಲ್ಲಿ ಮತ್ತೂಮ್ಮೆ ಜೆಡಿಯುನ ಪ್ರಬಲ ಸಂಘಟನೆ, ಬಲವರ್ಧನೆಗಾಗಿ ಕೆಆರ್‌ಎಸ್‌, ಕೆಲ ರೈತ ಸಂಘಗಳು ಜೊತೆಯಾಗಿವೆ. ಇನ್ನುಳಿದ ರಾಜಕೀಯ ಪಕ್ಷಗಳ ನಡುವೆ ಚರ್ಚೆ ನಡೆಸಲಾಗುವುದು. ಮುಂದಿನ ಜಿಲ್ಲಾ, ತಾಲೂಕು ಪಂಚಾಯತಿ, ನಗರಸಭೆ, ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುವುದು. ರಾಜ್ಯದಲ್ಲಿ ಮತ್ತೆ ಸಂಯುಕ್ತ ಜನತಾದಳ ನೇತೃತ್ವದ ಸರ್ಕಾರ ರಚನೆಗೆ ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ರೈತ ವಿಭಾಗದ ಮಹಿಳಾ ಮುಖಂಡೆ ಎಂ.ಡಿ. ಕಲಾವತಿ ಮಾತನಾಡಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ರೈತಾಪಿ ಮೂಲದ ಮಹಿಳಾ ಮುಖ್ಯಮಂತ್ರಿಯನ್ನಾಗಿಸುವ ನಿಟ್ಟಿನಲ್ಲಿ ಜೆಡಿಯು ಕೆಲಸ ಮಾಡುತ್ತಿದೆ ಎಂದರು. ಪಕ್ಷದ ಮುಖಂಡರಾದ ಗಂಗಾಧರ್‌, ಮಂಜುನಾಥ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next