Advertisement
ಒಟ್ಟಾರೆ ಪರೀಕ್ಷೆಯಲ್ಲಿ ಶೇ.75ಹೊಸಬರ ಪರೀಕ್ಷೆಗಳಾಗಿದ್ದು, ಶೇ.25 (ಒಬ್ಬರೇಹಲವು ಬಾರಿ ಪರೀಕ್ಷೆಗೊಳಾದವರ) ಪುನಾರಾವರ್ತಿತಪರೀಕ್ಷೆಗಳಾಗಿವೆ. ಹೆಚ್ಚು ಕಡಿಮೆ 2.3 ಕೋಟಿ ಮಂದಿಪರೀಕ್ಷೆಗೊಳಗಾಗಿದ್ದಾರೆ. ಸದ್ಯ ರಾಜ್ಯದ ಒಟ್ಟಾರೆಜನಸಂಖ್ಯೆ6.9ಕೋಟಿ ಇದ್ದು, ಈ ಮೂಲಕ ಮೂರುಮಂದಿಯಲ್ಲಿ ಒಬ್ಬರು ಕೊರೊನಾ ಪರೀಕ್ಷೆಮಾಡಿಸಿಕೊಂಡಂತಾಗಿದೆ.
Related Articles
Advertisement
ಆದರೆ, ಮೊದಲ ಅಲೆಮತ್ತು ಎರಡನೇ ಅಲೆ ಮಧ್ಯದಲ್ಲಿ ನಡೆದ ಎರಡುಕೋಟಿಯಲ್ಲಿ ಪಾಸಿಟಿವಿಟಿ ದರ ಶೇ 0.9ಕ್ಕೆ ಕುಗ್ಗಿತ್ತು.ಆದರೆ, ಎರಡನೇ ಅಲೆಯಲ್ಲಿ ನಡೆಯ ಮೂರನೇಕೋಟಿ ಪರೀಕ್ಷೆಗಳಲ್ಲಿ ಬರೋಬ್ಬರಿ ಶೇ.20ಕ್ಕೆಹೆಚ್ಚಳವಾಗಿದೆ.ಸಾಮರ್ಥ್ಯ ಇದ್ದಷ್ಟು ಪರೀಕ್ಷೆ ನಡೆಯುತ್ತಿಲ್ಲ:ರಾಜ್ಯದಲ್ಲಿ ನಿತ್ಯ 2 ಲಕ್ಷ ಪರೀಕ್ಷೆಗಳನ್ನು ನಡೆಸುವಸಾಮರ್ಥ್ಯವಿದೆ. 2ನೇ ಅಲೆಯಲ್ಲಿ ಒಂದು ದಿನಮಾತ್ರ ( ಏಪ್ರಿಲ್ 30 ರಂದು) ಅತಿ ಹೆಚ್ಚು 1.9 ಲಕ್ಷಪರೀಕ್ಷೆಗಳು ನಡೆದಿವೆ. ಆದರೆ, ನಿತ್ಯ ಸರಾಸರಿ ಪರೀಕ್ಷೆಪ್ರಮಾಣ 1.3 ಲಕ್ಷಕ್ಕೆ ಸೀಮಿತವಾಗಿದೆ. ಸಾಮರ್ಥ್ಯಮತ್ತು ಸೌಲಭ್ಯ ಇದ್ದರೂ ಹೆಚ್ಚು ಪರೀಕ್ಷೆಗಳುನಡೆಯದಿರುವುದು ಸೋಂಕಿನ ತೀವ್ರತೆ ನಿಧಾನವಾಗಿಕಡಿಮೆ ಆಗುವುದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಅಲೆಯಲ್ಲಿ ನಡೆದ ಒಂದು ಕೋಟಿಪರೀಕ್ಷೆಗಳಲ್ಲಿ 9 ಲಕ್ಷ ರ್ಯಾಪಿಡ್ ಪರೀಕ್ಷೆ ನಡೆಸಿದ್ದು, 91ಲಕ್ಷ ಆರ್‌ಟಿಪಿಸಿಆರ್ ಪರೀಕ್ಷೆಗಳು ನಡೆದಿವೆ. ಇನ್ನುಒಟ್ಟಾರೆ ಪರೀಕ್ಷೆಯಲ್ಲಿ2.49ಕೋಟಿ ಆರ್‌ಟಿಪಿಸಿಆರ್,50.05 ಲಕ್ಷ ರ್ಯಾಪಿಡ್ ಪರೀಕ್ಷೆಗಳು ನಡೆದಿವೆ
ಜಯಪ್ರಕಾಶ್ ಬಿರಾದಾರ್