Advertisement
ಈ ಬಗ್ಗೆ 2017- 22ರ ಅವಧಿಯ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಕುರಿತ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿ ಶೋಧಕರ ವರದಿಯು (ಸಿಎಜಿ) ಬೊಟ್ಟು ಮಾಡಿ ತೋರಿಸಿದೆ. ಸರ್ಕಾರಗಳ ಆಡಳಿತ ವಿಕೇಂದ್ರಿಕರಣದ ಮಾತುಗಳು ವಾಸ್ತವದಲ್ಲಿ ಜಾರಿಯಾಗಿಲ್ಲ. ಆದ್ದರಿಂದ ಸ್ಥಳೀ ಯ ಸಂಸ್ಥೆಗಳು ಕಾನೂನು ಬದ್ಧವಾಗಿ ಪಡೆಯಬೇಕಾದ ಅಧಿಕಾರದಿಂದ ವಂಚಿತವಾಗಿದ್ದು, ಸರ್ಕಾರವು ಪಂಚಾಯತ್ ರಾಜ್ ಸಂಸ್ಥೆಗಳ ಮೇಲೆ ಸವಾರಿ ಮಾಡುತ್ತಿರುವುದನ್ನು ಸಿಎಜಿ ವರದಿ ಉಲ್ಲೇಖೀಸಿದೆ.
Related Articles
Advertisement
ಪಂಚಾಯತ್ಗಳಿಗೆ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ. ಅನುದಾನ ಹಂಚುವಾಗ ರಾಜ್ಯ ಹಣಕಾಸು ಆಯೋಗದ ಶಿಪಾರಸಿಗೆ ಸರ್ಕಾರ ಮನ್ನಣೆ ನೀಡುತ್ತಿಲ್ಲ. ಅನುದಾನ ಬಿಡುಗಡೆಯಲ್ಲಿ ಕಡಿತ ಮಾಡಲಾಗುತ್ತದೆ. ಪಂಚಾಯತ್ಗಳಿಗೆ ತಮ್ಮ ನಿಧಿಯನ್ನು ಬಳಸಿಕೊಳ್ಳುವ ಸ್ವಾತಂತ್ರವನ್ನು ನಿಧಿಯ ಅಸಮರ್ಪಕ ಹಂಚಿಕೆಯ ಮೂಲಕ ಮೊಟಕು ಮಾಡಲಾಗಿದೆ. ರಾಜ್ಯ ಸರ್ಕಾರ ಆಸ್ತಿ ತೆರಿಗೆ ಮಂಡಳಿ ಯನ್ನು ಸ್ಥಾಪಿಸಿಲ್ಲ. ಜೊತೆಗೆ ಪಂಚಾಯತ್ಗಳಿಗೆ ಸ್ವಂತ ಆದಾಯ ಮೂಲ ಹೊಂದಲು ಸೂಕ್ತ ಕಾನೂನು ನೆರವು ನೀಡಲು ಸರ್ಕಾರ ವಿಫಲವಾಗಿದೆ. ಸಿಬ್ಬಂದಿ ನೇಮಕಾತಿಯಲ್ಲಿ ಸೂಕ್ತ ಅಧಿಕಾರ ಪಂಚಾಯತ್ಗಳ ಬಳಿಯಿಲ್ಲ. ಸಿಬ್ಬಂದಿ ಕೊರತೆ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಎಜಿ ವಿವರಿಸಿದೆ. ಮಣ್ಣಿನ ಸಂರಕ್ಷಣೆ ಸೇರಿದಂತೆ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಮುಂತಾದ ಪ್ರಮುಖ ಕರ್ತವ್ಯಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಗಿದ್ದರೂ ಅವುಗಳಿಗೆ ಒದಗಿಸಲಾಗದ ಹಣ ಅಭಿವೃದ್ಧಿ ಕಾರ್ಯಕ್ಕಿಂತ ಹೆಚ್ಚು ವೇತನಕ್ಕೆ ಬಳಕೆಯಾಗಿದೆ. ಬಿಡುಗಡೆಯಾದ ಹಣದ ಶೇ.70 ರಿಂದ ಶೇ. 90 ರಷ್ಟು ಹಣ ವೇತನಕ್ಕೆ ಹೋಗಿದೆ ಎಂದು ಸಿಎಜಿ ಬಹಿರಂಗ ಪಡಿಸಿದೆ.
ಸರ್ಕಾರದಿಂದಲೇ ಫಲಾನುಭವಿಗಳ ಆಯ್ಕೆ: ಫಲಾನುಭವಿಗಳ ಆಯ್ಕೆಯನ್ನು ರಾಜ್ಯ ಸರ್ಕಾರವೇ ನಡೆ ಸುತ್ತಿದೆ. ಕೇಂದ್ರ ಪ್ರಾಯೋಜಿತ ಪೋಷಣ್ ಅಭಿ ಯಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಜಾನುವಾರು ಮಿಷನ್, ರಾಷ್ಟ್ರೀಯ ತೋಟ ಗಾರಿಕೆ ಮಿಷನ್, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಮುಂತಾದ 66 ಯೋಜನೆಗಳನ್ನು ಪಂಚಾಯತ್ಗಳಿಗೆ ವರ್ಗಾಯಿಸಲಾಗಿದ್ದರೂ ರಾಜ್ಯ ವಲಯವೇ ಅನುಷ್ಠಾನ ಮಾಡುತ್ತಿದೆ.
ಇನ್ನು ರಾಜ್ಯ 450 ಯೋಜ ನೆಯನ್ನು ಪಂಚಾಯತ್ಗೆ ವರ್ಗಾಯಿಸಿ ದ್ದರೂ 337 ಯೋಜನೆ ರಾಜ್ಯ ವಲಯದಿಂದಲೇ ನಡೆಯುತ್ತಿವೆ. ಸರ್ಕಾರವು ಗ್ರಾ.ಪಂ ಮಟ್ಟದಲ್ಲಿ ಕೋರ್ ಸಮಿತಿ ರಚನೆಗೆ ಅವಕಾಶ ನೀಡಿದ್ದರೂ ಕೋರ್ ಸಮಿತಿ ರಚನೆ ಆಗಿಲ್ಲ. ತಾ.ಪಂ. ಮಾಸಿಕ ಸಭೆ ನಡೆಸಿಲ್ಲ, ಕೋರ್ ಕಮಿಟಿ ರಚನೆ ಆಗಿಲ್ಲ. ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿರುವ ಕೆಲಸಗಳ ಮೇಲ್ವಿಚಾರಣೆ ಸರಿಯಾಗಿ ಆಗುತ್ತಿಲ್ಲ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.
– ರಾಕೇಶ್ ಎನ್. ಎಸ್.