Advertisement
ಐಟಿ ಕಂಪನಿ ಆರಂಭವಾಗಿದ್ದು ಹೇಗೆ?
Related Articles
Advertisement
3 ಬಿಎಚ್ ಕೆ ಯಲ್ಲಿ ಸೈಬರೇಜ್ ಆರಂಭ!
1995ರಲ್ಲಿ ಅರುಣ್ ಅವರು ತಮ್ಮಲ್ಲಿದ್ದ ಸ್ವಲ್ಪ ಉಳಿತಾಯದ ಹಣದೊಂದಿಗೆ ಪಾರ್ಟನರ್ ಜತೆ ಸೇರಿ ಪುಣೆಯ ಸಾಲೋಂಖೆ ವಿಹಾರ್ ನಲ್ಲಿ 3 ಬಿಎಚ್ ಕೆ ಬಾಡಿಗೆಗೆ ಪಡೆದು “ಸೈಬರೇಜ್” (2000ನೇ ಇಸವಿಯಲ್ಲಿ ಹೆಸರನ್ನು ಸೈಬೇಜ್ ಎಂದು ಬದಲಾಯಿಸಿದ್ದರು) ಎಂಬ ಪುಟ್ಟ ಕಂಪನಿ ಆರಂಭಿಸಿದ್ದರು. ನಂತರ ನಾಲ್ವರು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದರು.
ಹೊಸ ಕನಸು ಕಟ್ಟಿಕೊಂಡಿದ್ದ ಯುವ ಉದ್ಯಮಿಗೆ ತಮ್ಮ ಯೂಸರ್ ಫ್ರೆಂಡ್ಲಿ ವೆಬ್ ಬ್ರೌಸರ್ ಉದ್ಯಮದಿಂದ ಜಾಕ್ ಪಾಟ್ ಹೊಡೆಯಲಿದೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ವ್ಯವಹಾರದ ಮೊದಲ ದಿನವೇ ಅರುಣ್ ಗೆ ದೊಡ್ಡ ಆಘಾತ ತಂದುಬಿಟ್ಟಿತ್ತು.! ಮೊದಲ ದಿನವೇ ನಾಲ್ಕು ಮಂದಿ ಉದ್ಯೋಗಿಗಳು ಕೆಲಸಕ್ಕೆ ಗೈರಾಗಿದ್ದರು. ಅಷ್ಟೇ ಅಲ್ಲ ಉದ್ಯಮದ ಪಾರ್ಟನರ್ ಕೂಡಾ ಕೈಕೊಟ್ಟು ಬಿಟ್ಟಿದ್ದರು!
‘ಕೂಡಲೇ ಅರುಣ್ ಅವರು ಪಾರ್ಟನರ್ ನ್ನು ಕರೆದು ನಾವು ಉದ್ಯಮ ಆರಂಭಿಸುವ, ನಮಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಹೇಳಿದ್ದರು. ತನಗೆ ಈ ವ್ಯವಹಾರದ ಮೇಲೆ ಆಸಕ್ತಿ ಇಲ್ಲ ಎಂದು ಪಾರ್ಟನರ್ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದ. ನೀವು ಕೊನೇ ಘಟ್ಟದಲ್ಲಿ ಯೂಟರ್ನ್ ಹೊಡೆಯಲು ಕಾರಣ ಏನು ಎಂದು ಅರುಣ್ ವಿಚಾರಿಸಿದಾಗ, ಇನ್ನು ಕೆಲವೇ ದಿನದಲ್ಲಿ ಮೈಕ್ರೋ ಸಾಫ್ಟ್ ಉಚಿತ ಬ್ರೌಸರ್ ಅನ್ನು ಬಿಡುಗಡೆ ಮಾಡಲಿದೆ. ಮೈಕ್ರೋಸಾಫ್ಟ್ ವೆಬ್ ಬ್ರೌಸರ್ ಗೆ ಮಾರ್ಕೆಟ್ ಮಾಡಲು ನನಗೆ ಆಫರ್ ನೀಡಿದ್ದಾರೆ. ಹೀಗಾಗಿ ನಿಮ್ಮ ವೆಬ್ ಬ್ರೌಸರ್ ಗೆ ಭವಿಷ್ಯ ಇಲ್ಲ ಎಂದು ಹೇಳಿ ಪಾರ್ಟನರ್ ಹೊರಟು ಹೋಗಿದ್ದರು!
ಆದರೆ ನಾನು ಈ ಯೋಜನೆ ಬಿಟ್ಟು ಬಿಡಲು ಸಿದ್ದವಿಲ್ಲವಾಗಿತ್ತು. ಏನೇ ಆಗಲಿ ಇಷ್ಟು ಬೇಗನೇ ಆಟದಿಂದ ಹಿಂದೆ ಸರಿಯಬಾರದು ಎಂದು ಅರುಣ್ ನಿರ್ಧರಿಸಿದ್ದರು. ಸೈಬೇಜ್ ಉದ್ಯೋಗ ಉಳಿಸಲು ಜನ್ಮತಳೆದಿದ್ದು, ಹೀಗಾಗಿ ನಮಗೆ ವೆಂಚರ್ ಕ್ಯಾಪಿಟಲ್ ಫಂಡ್ಸ್ ಅಗತ್ಯವಿತ್ತು. ಆದರೆ 90ರ ದಶಕದಲ್ಲಿ ಹೊಸ ಕಂಪನಿಗೆ ಬಂಡವಾಳ ಹೂಡಿಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಕೊನೆಗೂ ಛಲಬಿಡದೆ 3 ಬಿಎಚ್ ಕೆಯಲ್ಲಿಯೇ ನಾಲ್ಕು ಉದ್ಯೋಗಿಗಳನ್ನು ಹಾಕಿಕೊಂಡು ಸಹೋದರ ದೀಪಕ್ ನಥಾನಿ ಜತೆಗೂಡಿ ಬ್ರೌಸರ್ ತಯಾರಿಯಲ್ಲಿ ತೊಡಗಿದ್ದರು. 1995ರಲ್ಲಿ ಅರುಣ್ 32 Bitನ ವಿಂಡೋಸ್ ನ ಬೀಟಾ ವರ್ಷನ್ ಡೆವಲಪ್ ಮಾಡಿದ್ದರು.
1990ರ ದಶಕದಲ್ಲಿ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಎಂಬುದು ಅಪರಿಚಿತ ಹೆಸರಾಗಿತ್ತು. ಅಂದು ನಮಗೆ ನೇರ ಸ್ಪರ್ಧಿಯಾಗಿದ್ದ ನೆಟ್ ಸ್ಕೇಪ್ ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಸುತ್ತಿತ್ತು. ಅಲ್ಲದೇ ನೆಟ್ ಸ್ಕೇಪ್ ನಲ್ಲಿ ಇಡೀ ಜಗತ್ತಿನ ಐಟಿ ಪ್ರೊಫೆಶನಲ್ಸ್ ಇದ್ದರು. ನಮ್ಮಲ್ಲಿ ಇದ್ದದ್ದು ನಾಲ್ಕೇ ಜನ…
ಆರು ತಿಂಗಳ ಕಠಿಣ ಶ್ರಮದ ನಂತರ ಅರುಣ್ ಅವರ ವೆಬ್ ಬ್ರೌಸರ್ : ದ ಸೈಬರ್ ಏಜ್ ರೈಡರ್” ತಯಾರಾಗಿತ್ತು!