Advertisement

Toxic: ʼಟಾಕ್ಸಿಕ್‌ʼ ಶೂಟ್‌ನಲ್ಲಿ ಯಶ್;‌ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್

06:44 PM Nov 10, 2024 | Team Udayavani |

ಬೆಂಗಳೂರು/ ಮುಂಬಯಿ: ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ (Toxic) ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ.

Advertisement

ಅನೌನ್ಸ್‌ ಆದ ದಿನದಿಂದ ಟಾಕ್‌ ಆಫ್‌ ದಿ ಟೌನ್‌ ಆಗಿರುವ ಗೀತು ಮೋಹನ್‌ ದಾಸ್‌ (Geetu Mohandas) ಅವರ ‘ಟಾಕ್ಸಿಕ್‌ʼನಲ್ಲಿ ಭಾರತದ ಕಲಾವಿದರ ಜತೆಗೆ ವಿದೇಶಿ ಕಲಾವಿದರು, ತಂತ್ರಜ್ಞರು ಕೂಡ ಇದ್ದಾರೆ. ಇತ್ತೀಚೆಗೆ ಹಾಲಿವುಡ್‌ನ‌ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ( JJ Perry) ಮುಂಬೈನಲ್ಲಿ ಟಾಕ್ಸಿಕ್‌ ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ.

ಇದೀಗ ಮುಂಬಯಿನಲ್ಲಿ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲಿನ ರಾಕಿಂಗ್‌ ಸ್ಟಾರ್‌ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ರಾಕಿಂಗ್‌ ಸ್ಟಾರ್‌, ಕಿಯಾರಾ ಅಡ್ವಾಣಿ ಅವರು ಮುಂಬಯಿನ ವೆರ್ಸೋವಾ ಜೆಟ್ಟಿಯಲ್ಲಿ ಶೂಟಿಂಗ್‌ ಸ್ಪಾಟ್‌ನತ್ತ ಹೋಗುತ್ತಿರುವಾಗ ಪಾಪಾರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

Advertisement

ಸಿನಿಮಾಕ್ಕಾಗಿ ಇಟ್ಟಿರುವ ಹೊಸ ಗಡ್ಡದ ಲುಕ್‌ ಕ್ಯಾಮೆರಾ ಕಣ್ಣಿನಿಂದ  ಮುಚ್ಚಿಟ್ಟಿದ್ದಾರೆ. ಬಂದನಾ ಮಾಸ್ಕ್‌ ನಿಂದ ತನ್ನ ಮುಖವನ್ನು ಮುಚ್ಚಿಕೊಂಡು ಯಶ್‌ ಹೋಗಿದ್ದಾರೆ. ಇನ್ನೊಂದು ಕಡೆ ಇದೇ ಸ್ಪಾಟ್‌ನಲ್ಲಿ ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಚಿತ್ರದ ಶೂಟಿಂಗ್ ನಗರದ ದ್ವೀಪವೊಂದರಲ್ಲಿ ನಡೆಯಲಿದೆ ಎನ್ನಲಾಗಿದೆ.

ನಯನತಾರ (Nayanthara) ಜೊತೆಗೆ ಅಕ್ಷಯ್‌ ಒಬೆರಾಯ್ (Akshay Oberoi), ತೆಲುಗು-ತಮಿಳು ನಟ ತಣಿಕೆಲ್ಲ ಭರಣಿ ಅವರು ಚಿತ್ರತಂಡದ ಜತೆ ಸೇರಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ (Kiara Advani) ಹುಮಾ ಖುರೇಷಿ (Human Qureshi) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ನವಾಝುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ವರ್ಷ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next