Advertisement
ಶಿರ್ವದ ಹೆಚ್ಚಿನ ಜನರು ವಿದೇಶಗಳಲ್ಲಿದ್ದು ಅಂಚೆ ಕಚೇರಿ ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಅಂಚೆ ಸೇವೆಯೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮತ್ತು ಪೋಸ್ಟಲ್ ಇನ್ಶೂರೆನ್ಸ್ ಸೌಲಭ್ಯವಿದ್ದು ಗ್ರಾಹಕರ ಸಂಖ್ಯೆ ಅಧಿಕವಾಗಿದೆ. ಸಿಬಂದಿ ಕೊರತೆಯಿಂದ ಇಲ್ಲಿ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ.
ಮೇ ತಿಂಗಳಿನಲ್ಲಿ ಇಲ್ಲಿನ ಸಿಬಂದಿ ಸಮಸ್ಯೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು ಬಳಿಕ ಬೇರೆ ಕಡೆಯಿಂದ ಸಿಬಂದಿ ನಿಯೋಜಿಸಲಾಗಿತ್ತು. ಆದರೆ ಇದೀಗ ಮತ್ತೆ ಸಿಬಂದಿ ವಾಪಸ್ ಹೋಗಿದ್ದಾರೆ. ಇಲ್ಲಿ ಹಿಂದೆ ಓರ್ವ ಪೋಸ್ಟ್‌ಮಾಸ್ಟರ್ ಮತ್ತು 4 ಸಿಬಂದಿಯಿದ್ದರೆ ಓರ್ವ ಸಿಬಂದಿ ಕಡಿಮೆಯಿದ್ದಾರೆ. ಕೆಲಸದೊತ್ತಡ ಮತ್ತಷ್ಟು ಹೆಚ್ಚಿರುವುದರಿಂದ ಸಿಬಂದಿ ಸಂಖ್ಯೆ ಏರಿಕೆಯಾಗದೇ ಸಮಸ್ಯೆಯಾಗಿದೆ. ಇಲ್ಲಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದಾರೆ. ಲಭ್ಯವಿರುವ ಸಿಬಂದಿ ಜನರನ್ನು ಹಿಂದೆ ಕಳುಹಿಸದೇ ಪ್ರತಿಕ್ರಿಯಿಸಬೇಕು.
– ಮೆಲ್ವಿನ್ ಡಿಸೋಜಾ, ಗ್ರಾಹಕರು
Related Articles
ಸಿಬಂದಿ ಕೊರತೆ ಕಾಡುತ್ತಿದೆ. ಉತ್ತಮ ಸೇವೆಯ ದೃಷ್ಟಿಯಿಂದ ಬೆಳಗ್ಗೆ 8ರಿಂದ 6ರ ಅನಂತರವೂ ದುಡಿಮೆ ಮಾಡುತ್ತಿದ್ದೇವೆ. ಸೂಕ್ತ ಸಿಬಂದಿ ನೇಮಿಸಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
– ಕೃಷ್ಣಪ್ಪ , ಪೋಸ್ಟ್ ಮಾಸ್ಟರ್, ಶಿರ್ವ
Advertisement
ಸಮಸ್ಯೆ ಪರಿಶೀಲನೆಗ್ರಾಹಕರ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕಾಪುವಿನಿಂದ ಸಿಬಂದಿ ನಿಯೋಜನೆ ಮಾಡಿದ್ದೇವೆ. ಜನರ ಸೇವೆಗೆ ಯಾವುದೇ ಕುಂದು ಬಾರದಂತೆ ಪ್ರಯತ್ನಿಸುತ್ತೇವೆ.
– ರಾಜಶೇಖರ ಭಟ್, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ