ಹೈದರಾಬಾದ್: ಅಂತಾರಾಷ್ಟ್ರೀಯ ಕೊರಿಯರ್ ಮತ್ತು ಲಾಜಿಸ್ಟಿಕ್ಸ್ ಸೇವೆಗಳಲ್ಲಿ ಪ್ರಮುಖ ಹೆಸರಾಗಿರುವ ಗರುಡವೇಗ ಲಾಜಿಸ್ಟಿಕ್ಸ್, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತನ್ನ ಹೊಸ ಗ್ಲೋಬಲ್ ಕಾರ್ಪೊರೇಟ್ ಕಚೇರಿಯನ್ನು ಆರಂಭಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗರುಡವೇಗದ ಸಿಇಒ ಸತೀಶ್ ಲಕ್ಕರಾಜು ಅವರು, “ದಕ್ಷಿಣ ರಾಜ್ಯಗಳಲ್ಲಿ ನಮ್ಮ ಸೇವೆಯ ಯಶಸ್ಸಿನ ನಂತರ ನಾವು ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತದಾದ್ಯಂತ ನಮ್ಮ ಶಾಖೆಗಳನ್ನು ವಿಸ್ತರಿಸುವುದರ ಜತೆಗೆ ನಾವು ನಮ್ಮ ಗುರಿಯನ್ನು ಜಾಗತಿಕ ಬೆಳವಣಿಗೆಯತ್ತ ಕೇಂದ್ರೀಕರಿಸಿದ್ದೇವು ಎಂದು ಹೇಳಿದರು.
ನಾವು ಪ್ರಧಾನವಾಗಿ ಉತ್ತರ ಅಮೆರಿಕಾದ ಮೇಲೆ ನಮ್ಮ ಉದ್ಯಮದ ಬಗ್ಗೆ ಗಮನ ಹರಿಸಿದ್ದರೂ ಕೂಡಾ ಭವಿಷ್ಯದಲ್ಲಿ ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಲ್ಲೂ ನಮ್ಮ ಸೇವೆಗಳನ್ನು ವಿಸ್ತರಿಸಲು ಸಿದ್ಧರಿದ್ದೇವೆ ಎಂದು ಲಕ್ಕರಾಜು ಈ ಸಂದರ್ಭದಲ್ಲಿ ತಿಳಿಸಿದರು.
ಹೊಸ ಕಾರ್ಪೊರೇಟ್ ಕಚೇರಿಯು ಗರುಡವೇಗದ ಜಾಗತಿಕ ಕಾರ್ಯಾಚರಣೆ ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಆಶಯ ಹೊಂದಿದ್ದು, ಗರುಡವೇಗ ಕಚೇರಿಯು ಹೈದರಾಬಾದ್‌ನ ಹೃದಯಭಾಗದಲ್ಲಿದ್ದು, ಈ ಆಧುನಿಕ ಸೌಲಭ್ಯವು ಲಾಜಿಸ್ಟಿಕ್ಸ್ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದರು.
ಗರುಡವೇಗ ಸಮರ್ಪಕ ಮತ್ತು ವಿಶ್ವಾಸಾರ್ಹ ಸೇವೆಗಳಿಗೆ ಹೆಸರುವಾಸಿಯಾಗಿದೆ, ಗರುಡವೇಗದ ಶಾಖೆಗಳು 220 ದೇಶಗಳಲ್ಲಿ ವಿಸ್ತರಿಸಿದ್ದು. ಈ ಹೊಸ ಕಾರ್ಪೊರೇಟ್ ಕಚೇರಿಯನ್ನು ತೆರೆಯುವುದರೊಂದಿಗೆ, ಕಂಪನಿಯು ತನ್ನ ಜಾಗತಿಕ ನೆಟ್‌ವರ್ಕ್ ಅನ್ನು ಇನ್ನಷ್ಟು ಬಲಪಡಿಸಿಕೊಂಡಂತಾಗಿದೆ.
ಉದ್ಘಾಟನಾ ಸಮಾರಂಭ (ಡಿ.2)ದಲ್ಲಿ ತೆಲಂಗಾಣ ಸರ್ಕಾರದ ಲಾಜಿಸ್ಟಿಕ್ಸ್ ನಿರ್ದೇಶಕ ಅಪರ್ಣಾ ಭೂಮಿ ಮತ್ತು ಜಿಎಂಆರ್ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಕಮರ್ಷಿಯಲ್ ಮುಖ್ಯಸ್ಥ ಪ್ರಸಾದ್ ಜಲಿಗಾಮ, ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಸುರೇಶ್ ಮಾಧವಪೆಡ್ಡಿ ಸೇರಿದಂತೆ ಹಲವು ಗಣ್ಯ ಉದ್ಯಮಿಗಳು ಭಾಗವಹಿಸಿದ್ದರು.