ಬೆಂಗಳೂರು: ರಾಜ್ಯದ ಈ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶೇ. 83.8 ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯು (ಶೇ.96.8) ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ ಎರಡನೇ ಸ್ಥಾನ (96.74) ಪಡೆದು ಕೊಂಡಿದ್ದು, ಮೂರನೇ ಸ್ಥಾನ ಹಾಸನ ಜಿಲ್ಲೆ (96.68) ಪಡೆದಿದೆ.
ಈ ಬಾರಿ 8,35,102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 59,246 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ:IPL 2023: ಔಟ್.. ನೋಬಾಲ್.. ಸಿಕ್ಸ್… ಸಮದ್ ಎದುರಿಸಿದ ಆ ಕೊನೆಯ ಬಾಲ್ ನ ವಿಡಿಯೋ ನೋಡಿ
Related Articles
ನಾಲ್ಕು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭೂಮಿಕಾ ಪೈ, ನ್ಯೂ ಮೆಕಾಲೆ ಸ್ಕೂಲ್, ಹೊಸೂರು ರಸ್ತೆ, ಬೆಂಗಳೂರು. ಯಶಸ್ ಗೌಡ, ಬಾಲಗಂಗಾಧರನಾಥ ಸ್ವಾಮೀಜಿ ಶಾಲೆ, ಚಿಕ್ಕಬಳ್ಳಾಪುರ. ಅನುಪಮ ಶೈಲೇಶ್, ಕುಮಾರೇಶ್ವರ ಹೈ ಸ್ಕೂಲ್, ಸವದತ್ತಿ. ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ, ಆಕ್ಸ್‌ಫರ್ಡ್ ಸ್ಕೂಲ್, ಮುದ್ದೇಬಿಹಾಳ ವಿಜಯಪುರ ರ್ಯಾಂಕ್ ಪಡೆದವರು.
ಗಮನಿಸಿ
ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಫೋಟೋಕಾಪಿ ಪಡೆಯಲು ಮೇ. 08 ರಿಂದ ಮೇ.14ರವರೆಗೆ ಅವಕಾಶವಿದೆ. ಮರು ಮೌಲ್ಯ ಮಾಪನ ಮಾಡಲು ಮೇ.15 ರಿಂದ ಮೇ.21 ರವರೆಗೆ ಅವಕಾಶವಿದೆ. ಪೂರಕ ಪರೀಕ್ಷೆ ನೋಂದಣಿಗೆ ಮೇ.08 ರಿಂದ ಮೇ. 15 ರವರೆಗೆ ಅವಕಾಶ ನೀಡಲಾಗಿದೆ.