Advertisement

ಇಂದು ಮಧ್ಯಾಹ್ನ 3.30ಕ್ಕೆ SSLC ಫಲಿತಾಂಶ ಪ್ರಕಟ

08:29 AM Aug 09, 2021 | Team Udayavani |

ಬೆಂಗಳೂರು: ಇಂದು ಮಧ್ಯಾಹ್ನ 3.30ಕ್ಕೆ ಎಸ್​​ಎಸ್​​ಎಲ್ ​​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿಯ ರಿಸಲ್ಟ್ ವಿದ್ಯಾರ್ಥಿಗಳ ಮೊಬೈಲ್​​ಗೆ ಬರಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.

Advertisement

ಹೊಸದಾಗಿ ಶಿಕ್ಷಣ ಸಚಿವರಾಗಿರುವ ಬಿ.ಸಿ.ನಾಗೇಶ್​​ ನೇತೃತ್ವದಲ್ಲಿ ಫಲಿತಾಂಶ ಹೊರ ಬೀಳಲಿದೆ. ಇವರಿಗೆ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಸಾಥ್ ನೀಡಲಿದ್ದಾರೆ.

ಶಿಕ್ಷಣ ಇಲಾಖೆ ಜುಲೈ 19 ಹಾಗೂ 22 ರಂದು ರಾಜ್ಯಾದ್ಯಂತ SSLC ಪರೀಕ್ಷೆಗಳನ್ನು ನಡೆಸಿತ್ತು. ಈ ಬಾರಿ 8,19,694 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಕರ್ನಾಟಕ ಸರ್ಕಾರದ ಅಧಿಕೃತ ವೆಬ್​​ಸೈಟ್​​​​​​​​​ sslc.karnataka.gov.in ಅಲ್ಲಿ ಹೊರ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next