Advertisement

ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ SSLC ಪರೀಕ್ಷೆ ಬರೆಯಲು ಅವಕಾಶ: ಸುರೇಶ್ ಕುಮಾರ್

02:25 PM Jun 06, 2020 | sudhir |

ಬಳ್ಳಾರಿ: ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

Advertisement

ಪರೀಕ್ಷೆ ದಿನಾಂಕ ನಿಗದಿ ಪಡಿಸುವ ಮೊದಲು ಅನೇಕರ ಜತೆ ಸಮಾಲೋಚನೆ ನಡೆಸಿದ್ದೇವೆ , ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಕೂಡ ಮಾರ್ಗಸೂಚಿ ನೀಡಿ ಜೂನ್ ೨೫ ರಿಂದ ಜುಲೈ ನಾಲ್ಕರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೈಕೋರ್ಟ್ ಗೂ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಇತ್ಯರ್ಥ ಮಾಡಿ, ಪರೀಕ್ಷೆ ಮಾಡಲು ಕೆಲವು ನಿಯಮಗಳನ್ನು ಮಾಡಿದೆ. ಈ ಪರೀಕ್ಷೆಯಲ್ಲಿ ಎರಡು ವಿಚಾರವಾಗಿ ಪ್ರಾಮುಖ್ಯತೆ ನೀಡಿದ್ದೇವೆ- ಮೊದಲನೇಯದು ಮಕ್ಕಳ ಸುರಕ್ಷತೆ, ಎರಡನೆಯದು ಮಕ್ಕಳ ಆತ್ಮವಿಶ್ವಾಸ.

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ನಾಲ್ಕೈದು ಕ್ರಮ ಕೈಗೊಂಡಿದ್ದಿದು:
– ಸಾಮಾಜಿಕ ಅಂತರ ಇರಬೇಕು, ಮೂರೂವರೆ ಅಡಿ ಅಂತರ ಕಾಪಾಡಬೇಕು.
– ಒಂದು ಪರೀಕ್ಷೆ ಹಾಲ್ ನಲ್ಲಿ 18 ಜನರಿಂದ 20 ವಿದ್ಯಾರ್ಥಿಗಳನ್ನು ಕೂರಿಸುವುದು.
– ಕಡ್ಡಾಯವಾಗಿ ಮಾಸ್ಕ್ ಬಳಸುವುದು.
– ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಯ ಅರೋಗ್ಯ ತಪಾಸಣೆ ಕಡ್ಡಾಯ

ರಾಜ್ಯದಲ್ಲಿ 8,48,203 ಮಕ್ಕಳು ಪರೀಕ್ಷೆ ಬರೆಯುತ್ತಾರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆ ಕೈಯಾರೆ ತಯಾರಿಸಿದ ಮಾಸ್ಕ್ ಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡಿದೆ.

Advertisement

ಪ್ರತಿ ಮಗುವಿಗೆ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿದ್ದು ತಪಾಸಣೆಯಲ್ಲಿ ಮಗುವಿಗೆ ಅನಾರೋಗ್ಯ ಕಂಡುಬಂದಲ್ಲಿ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪರಿಕ್ಷಾ ಕೇಂದ್ರಗಳಿಗೆ ಸ್ವಯಂ ಸೇವಕರಿಂದ ಸ್ಯಾನಿಟೈಜೇಷನ್ ಮಾಡಲಾಗುತ್ತದೆ ಜೊತೆಗೆ ಪೊಷಕರು ಯಾರೂ ಕೂಡ ಮಕ್ಕಳನ್ನು ಬಿಡಲು ಬಂದ ಸಂದರ್ಭದಲ್ಲಿ ಗುಂಪು ಕಟ್ಟಬಾರದು ಪೋಷಕರಿಗೆ ಪರೀಕ್ಷಾ ಕೇಂದ್ರದ ಒಳಗಡೆ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷೆ ಕೇಂದ್ರದ ಸೂಪರ್ ವೈಸರ್ ಗಳು ಕೂಡ ಈ ಎಲ್ಲಾ ಕ್ರಮಗಳಿಗೆ ಒಳಪಡಬೇಕು. ಮಕ್ಕಳು ಬಿಸಿನೀರು ಮನೆಯಿಂದ ತರಬೇಕು.

ಮಕ್ಕಳನ್ನು ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆತರುವ ವ್ಯವಸ್ಥೆಯನ್ನು ಮಾಡಲಾಗುವುದು ಜೊತೆಗೆ ಚಂದನ ದೂರದರ್ಶನ ವಾಹಿನಿ ಮೂಲಕ ಪಾಠ ಮಾಡಿಸಿದ್ದೇವೆ. ಜೂನ್ 10 ರಿಂದ 20 ರವರೆಗೆ ಪುನರ್ಮನನ ತರಗತಿ ಚಂದನ ವಾಹಿನಿಯಲ್ಲಿ ಮಾಡಲಾಗುತ್ತದೆಎಂದು ತಿಳಿಸಿದ್ದಾರೆ.

ಜುಲೈ ನಾಲ್ಕರಂದು ಪರೀಕ್ಷೆ ಮುಗಿಯುತ್ತದೆ, ಜುಲೈ ಕೊನೆವಾರ, ಅಥವಾ ಆಗಷ್ಟ್ ಮೊದಲ ವಾರದಲ್ಲಿ ಫಲಿತಾಂಶ ನೀಡಲಾಗುತ್ತದೆ ಪೂರಕ ಪರೀಕ್ಷೆಗೆ ಅವಕಾಶ ಇದೆ, ಈ ಪರೀಕ್ಷೆಯಲ್ಲಿ ಅನಾರೋಗ್ಯದ ಕಾರಣ ಬರೆದಿರಲಿಲ್ಲಾ ಅಂದ್ರೆ ಅವರನ್ನು ಪೂರಕ ಪರೀಕ್ಷೆಯಲ್ಲಿ ಬರೆಯಲಾಗುತ್ತದೆ ಅಂತವರನ್ನು ಫ್ರೇಷರ್ ಕ್ಯಾಂಡಿಡೆಟ್ ಅಂತ ಪರಿಣಗಿಸಲಾಗುತ್ತದೆ.

ಶಾಲೆ ಪ್ರಾರಂಭಕ್ಕೆ ಯಾವುದೇ ಗ್ರೀನ್ ಸಿಗ್ನಲ್ ಇಲ್ಲಾ: ಪೊಷಕರ ಅಭಿಪ್ರಾಯ ಪಡೆದ ನಂತರ ತಿರ್ಮಾನ ಮಾಡಲಾಗುತ್ತದೆ- ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುತ್ತೇವೆ- ಆನ್ ಲೈನ್ ಕ್ಲಾಸ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಆಗುತ್ತದೆ ಎಂಬುದು ಸಾರ್ವತ್ರಿಕ ಅಭಿಪ್ರಾಯ ಇದೆ, ಬಹುತೇಕ ಜನರು ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ದರಿಲ್ಲಾ- ಆನ್ ಲೈನ್ ಶಿಕ್ಷಣ ಒಂದು ಗೀಳಾಗಿದೆ, ಮಕ್ಕಳ ವಯಸ್ಸು, ತರಗತಿ ಮುಖ್ಯ – LKG, UKG ಮಕ್ಕಳು ಆಟ ಆಡಬೇಕೇ ಹೊರತು, ಮೊಬೈಲ್, ಲ್ಯಾಪ್‌ಟಾಪ್ ಮುಂದೆ ಕೂಡಬಾರದು. ಯಾವುದೇ ಕಾರಣಕ್ಕೂ ಈ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಬಾರದು, ಯಾವ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಬೇಕೆಂದು ಸೋಮವಾರ ತಿರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next