ದೇಶವನ್ನೇ ತಲ್ಲಣಗೊಳಿಸಿದ ಈ ದುರಂತ ಘಟನೆಯ ಬಳಿಕ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಅವರು ದೇಶಾದ್ಯಂತ ತುರ್ತುಸ್ಥಿತಿ ಘೋಷಿಸಿದ್ದು ದೇಶದ ಮಿಲಿಟರಿಗೆ ತಾತ್ಕಾಲಿಕ ಪೊಲೀಸ್ ಅಧಿಕಾರವನ್ನು ನೀಡಲಾಗಿದೆ. ಕೆಲವೊಂದು ಸಾಮಾಜಿಕ ಜಾಲತಾಣ ಸೈಟ್ ಗಳನ್ನೂ ಮುಚ್ಚಲಾಗಿದೆ. ರಾಷ್ಟ್ರ ರಾಜಧಾನಿಯ ಜನನಿಬಿಡ ಪ್ರದೇಶಗಳಲ್ಲಿ ಸಶಸ್ತ್ರ ಯೋಧರು ಪಥಸಂಚಲನ ನಡೆಸುತ್ತಿದ್ದಾರೆ. ಕರ್ಫ್ಯೂ ಸ್ಥಿತಿಯನ್ನು ಎರಡನೇ ದಿನಕ್ಕೆ ಮುಂದುವರೆಸಲಾಗಿದೆ.
Advertisement
2009ರಲ್ಲಿ ನಾಗರಿಕ ಯುದ್ಧಕ್ಕೆ ಅಂತ್ಯ ಹಾಡಿದ್ದ ಬಳಿಕ ಮೊನ್ನೆ ರವಿವಾರ ನಡೆದ ಈ ಆತ್ಮಾಹುತಿ ಬಾಂಬ್ ದಾಳಿಗಳೇ ದ್ವೀಪರಾಷ್ಟ್ರದಲ್ಲಿ ಸಂಭವಿಸಿದ ಅತೀದೊಡ್ಡ ದುರಂತವಾಗಿದೆ. ಇನ್ನು ಸೋಮವಾರದಂದು ಕೊಲಂಬೋದ ಪ್ರಮುಖ ಬಸ್ ನಿಲ್ದಾಣವೊಂದರಲ್ಲಿ 87 ಬಾಂಬ್ ಡಿಟೋನೇಟರ್ ಗಳು ಪತ್ತೆಯಾಗಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು.