Advertisement
ಪ್ರತಿಯೊಬ್ಬ ಆಟಗಾರನಿಗೂ ಫಿಟ್ನೆಸ್ ಕಾಯ್ದುಕೊಳ್ಳುವುದೇ ಮುಖ್ಯವಾಗಿರುತ್ತದೆ. ಅಂಕಣದಲ್ಲಿ ಚುರುಕಾಗಿ ಪ್ರದರ್ಶನ ನೀಡಬೇಕು ಅಂದರೆ ಫಿಟೆ°ಸ್ ಇದ್ದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಎದುರಾಳಿಗೆ ಮಂಡಿಯೂರುವ ಪ್ರಸಂಗ ಎದುರಿಸಬೇಕಾಗುತ್ತದೆ. ವಿಶ್ವದಲ್ಲಿಯೇ ಅತ್ಯಂತ ಫಿಟೆ°ಸ್ ಆಟಗಾರ ಎಂದು ಖ್ಯಾತರಾದವರು ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊ. ಆದರೆ ರೊನಾಲ್ಡೊ ಕೂಡ ಅತಿಯಾದ ಫುಟ್ಬಾಲ್‌ನಿಂದ ಬಳಲಿ ಗಾಯಕ್ಕೆ ತುತ್ತಾದ ಇತಿಹಾಸವಿದೆ. ಅದೇ ರೀತಿ ಕ್ರೀಡಾ ಜಗತ್ತಿನ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ರೋಜರ್ ಫೆಡರರ್, ಟೈಗರ್ ವುಡ್ಸ್, ಲಿನ್ ಡಾನ್, ಲಿಯೊನೆಲ್ ಮೆಸ್ಸಿ…. ಇವರೂ ಕೂಡ ಗಾಯದಿಂದ ತಪ್ಪಿಸಿಕೊಂಡವರಲ್ಲ.
ಹೌದು, ಆಟಗಾರರು ರೋಬೋಟ್‌ಗಳಲ್ಲ. ನಿರಂತರ ಆಟ ಅವರನ್ನು ಸುಸ್ತು ಮಾಡುತ್ತದೆ. ಅವರು ಗಾಯಕ್ಕೆ ತುತ್ತಾಗುವಂತೆ ಮಾಡುತ್ತದೆ. ಗಾಯ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಇದರ ಪರಿಣಾಮ ಆಟದ ಮೇಲೆ ಬೀಳುತ್ತದೆ. ಹೀಗಾಗಿ, ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮುಖ್ಯವಾಗಿ ಆಗಾಗ ವಿಶ್ರಾಂತಿ ಪಡೆಯಬೇಕಾಗುತ್ತದೆ. ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಹೀಗಾಗಿಯೇ ವರ್ಷದಲ್ಲಿ ಅನೇಕ ಟೂರ್ನಿಗಳನ್ನು ಕೈಬಿಡುತ್ತಾರೆ. ಒಂದರ ಹಿಂದೆ ಮತ್ತೂಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಂದಾಗುವುದಿಲ್ಲ. ಇದು ಸಿಂಧು ಫಿಟೆ°ಸ್ ಕಾಯ್ದುಕೊಳ್ಳಲು ನೆರವು ನೀಡುತ್ತಿದೆ ಅನ್ನುವುದು ಜಗಜ್ಜಾಹೀರು. ಆಟ ಅತಿಯಾದರೆ ಗಾಯಕ್ಕೆ ಆಹ್ವಾನ
Related Articles
Advertisement
ಪ್ರತಿಯೊಬ್ಬ ಆಟಗಾರನಿಗೂ ಫಿಟ್ನೆಸ್ ಕಾಯ್ದುಕೊಳ್ಳುವುದೇ ಮುಖ್ಯವಾಗಿರುತ್ತದೆ. ಅಂಕಣದಲ್ಲಿ ಚುರುಕಾಗಿ ಪ್ರದರ್ಶನ ನೀಡಬೇಕು ಅಂದರೆ ಫಿಟೆ°ಸ್ ಇದ್ದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಎದುರಾಳಿಗೆ ಮಂಡಿಯೂರುವ ಪ್ರಸಂಗ ಎದುರಿಸಬೇಕಾಗುತ್ತದೆ. ವಿಶ್ವದಲ್ಲಿಯೇ ಅತ್ಯಂತ ಫಿಟೆ°ಸ್ ಆಟಗಾರ ಎಂದು ಖ್ಯಾತರಾದವರು ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊ. ಆದರೆ ರೊನಾಲ್ಡೊ ಕೂಡ ಅತಿಯಾದ ಫುಟ್ಬಾಲ್‌ನಿಂದ ಬಳಲಿ ಗಾಯಕ್ಕೆ ತುತ್ತಾದ ಇತಿಹಾಸವಿದೆ. ಅದೇ ರೀತಿ ಕ್ರೀಡಾ ಜಗತ್ತಿನ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ರೋಜರ್ ಫೆಡರರ್, ಟೈಗರ್ ವುಡ್ಸ್, ಲಿನ್ ಡಾನ್, ಲಿಯೊನೆಲ್ ಮೆಸ್ಸಿ…. ಇವರೂ ಕೂಡ ಗಾಯದಿಂದ ತಪ್ಪಿಸಿಕೊಂಡವರಲ್ಲ.
ಟೂರ್ನಿಗಳ ನಡುವೆ ಬಿಡುವು ಅಗತ್ಯಹೌದು, ಆಟಗಾರರು ರೋಬೋಟ್‌ಗಳಲ್ಲ. ನಿರಂತರ ಆಟ ಅವರನ್ನು ಸುಸ್ತು ಮಾಡುತ್ತದೆ. ಅವರು ಗಾಯಕ್ಕೆ ತುತ್ತಾಗುವಂತೆ ಮಾಡುತ್ತದೆ. ಗಾಯ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಇದರ ಪರಿಣಾಮ ಆಟದ ಮೇಲೆ ಬೀಳುತ್ತದೆ. ಹೀಗಾಗಿ, ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮುಖ್ಯವಾಗಿ ಆಗಾಗ ವಿಶ್ರಾಂತಿ ಪಡೆಯಬೇಕಾಗುತ್ತದೆ. ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಹೀಗಾಗಿಯೇ ವರ್ಷದಲ್ಲಿ ಅನೇಕ ಟೂರ್ನಿಗಳನ್ನು ಕೈಬಿಡುತ್ತಾರೆ. ಒಂದರ ಹಿಂದೆ ಮತ್ತೂಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಂದಾಗುವುದಿಲ್ಲ. ಇದು ಸಿಂಧು ಫಿಟೆ°ಸ್ ಕಾಯ್ದುಕೊಳ್ಳಲು ನೆರವು ನೀಡುತ್ತಿದೆ ಅನ್ನುವುದು ಜಗಜ್ಜಾಹೀರು. ಶ್ರೀಕಾಂತ್‌ಗೆ ತಪ್ಪಿದ ಪಿಬಿಎಲ್
ಕ್ರಿಕೆಟ್ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹೇಗೆ ಅಕ್ಷಯ ಪಾತ್ರೆಯೋ, ಹಾಗೇ ಬ್ಯಾಡ್ಮಿಂಟನ್ ಆಟಗಾರರಿಗೆ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್(ಪಿಬಿಎಲ್) ಅಕ್ಷಯ ಪಾತ್ರೆಯಾಗಿ ಬೆಳೆಯುತ್ತಿದೆ. ಇದರಿಂದಾಗಿ ಇತ್ತೀಚೆಗೆ ಬ್ಯಾಡ್ಮಿಂಟನ್ ಆಟಗಾರರ ದೃಷ್ಟಿ ಪಿಬಿಎಲ್ ಮೇಲಿದೆ. ಖ್ಯಾತ ಬ್ಯಾಡ್ಮಿಂಟನ್ ಆಟಗಾರನಾದ ಶ್ರೀಕಾಂತ್ ಕೂಡ ಪಿಬಿಎಲ್ ಆಡುವ ಉತ್ಸಾಹದಲ್ಲಿದ್ದರು. 56.10 ಲಕ್ಷ ರೂ.ಗೆ ಅವಧ್ ವಾರಿಯರ್ ತಂಡಕ್ಕೆ ಹರಾಜಾಗಿದ್ದರು. ಆದರೆ ನಿರಂತರ ಟೂರ್ನಿಯಿಂದ ಬಳಲಿದ ಶ್ರೀಕಾಂತ್ ಗಾಯಕ್ಕೆ ತುತ್ತಾಗಬೇಕಾಯಿತು. ಗಾಯದ ಕಾರಣಕ್ಕಾಗಿ, ದೊಡ್ಡ ಮೊತ್ತದ ಹಣವೂ ಕೈತಪ್ಪುವಂತಾಯಿತು.