ಹೊಸದಿಲ್ಲಿ : ಕಳೆದ ಫೆ.24ರ ಶನಿವಾರದಂದು ದುಬೈ ಹೊಟೇಲ್ ಕೋಣೆಯ ಸ್ನಾನಗೃಹದಲ್ಲಿನ ಬಾತ್ ಟಬ್‌ನಲ್ಲಿ ಬಿದ್ದು ಆಕಸ್ಕಿಕವಾಗಿ ಮುಳುಗಿ ಮೃತ ಪಟ್ಟ 54ರ ಹರೆಯದ ಬಾಲಿವುಡ್‌ನ ಮೊತ್ತ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅವರ ಪಾರ್ಥಿವ ಶರೀರ ಇಂದು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಮುಂಬಯಿ ವಿಮಾನ ನಿಲ್ದಾಣಕ್ಕೆ ಬರಲಿದೆ.
ಅನಿಲ್ ಅಂಬಾನಿ ಅವರ ಪ್ರೈವೇಟ್ ಜೆಟ್ ಮೂಲಕ ಮುಂಬಯಿ ವಿಮಾನ ನಿಲ್ದಾಣದ ಗೇಟ್ ನಂಬರ್ 8ಕ್ಕೆ ರಾತ್ರಿ 10.30ಕ್ಕೆ ತಲುಪುವ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಅಲ್ಲಿಂದ ಅನಿಲ್ ಕಪೂರ್ ನಿವಾಸಕ್ಕೆ ಒಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಅನಿಲ್ ಕಪೂರ್ ಅವರ ನಿವಾಸಕ್ಕೆ ಅನೇಕ ಬಾಲಿವುಡ್ ತಾರೆಯರು ಈಗಾಗಲೇ ಭೇಟಿಕೊಡಲು ಆರಂಭಿಸಿದ್ದು ಶ್ರೀದೇವಿ ಅವರ ಪುತ್ರಿಯರಾದ ಜಾಹ್ನವಿ ಮತ್ತು ಖುಶಿ ಕಪೂರ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಗಲ್ಫ್ ನ್ಯೂಸ್ ವರದಿಯ ಪ್ರಕಾರ ದುಬೈ ಪಬ್ಲಿಕ್ ಪ್ರಾಸಿಕ್ಯೂಟರ್ ಕಾರ್ಯಾಲಯ ನಟಿ ಶ್ರೀದೇವಿ ಅವರ ಸಾವಿನ ಕೇಸನ್ನು ಕೊನೆಗೊಳಿಸಲಾಗಿದ್ದು ಆಕೆಯ ಪಾರ್ಥಿವ ಶರೀರವನ್ನು ಆಕೆಯ ಕುಟುಂಬದವರಿಗೆ ಬಿಟ್ಟುಕೊಡಲಾಗುವುದು ಎಂದು ತಿಳಿಸಲಾಗಿತ್ತು.