Advertisement

Bihar: ಶಿಕ್ಷಕನನ್ನು ಅಪಹರಿಸಿ ಮಹಿಳೆ ಜತೆ ಬಲವಂತದ ವಿವಾಹ!

01:10 AM Dec 15, 2024 | Team Udayavani |

ಪಟ್ನಾ: ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಪಹರಿಸಿ, ಇಚ್ಛೆಗೆ ವಿರುದ್ಧವಾಗಿ ವಿವಾಹ ನಡೆಸಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಧು, “ನನ್ನೊಂದಿಗೆ ಸಂಬಂಧದಲ್ಲಿದ್ದ ಆತ ಸರಕಾರಿ ಹುದ್ದೆ ಪಡೆದ ಬಳಿಕ ನನ್ನನ್ನು ನಿರ್ಲಕ್ಷಿಸಿದ್ದ. ಆದ್ದರಿಂದ ಆತನನ್ನು ಅಪಹರಿಸಿ ವಿವಾಹ ಮಾಡಿಕೊಟ್ಟಿದ್ದಾರೆ’ ಎಂದಿದ್ದಾಳೆ. ಮದುವೆ ಬಳಿಕ ಅಲ್ಲಿಂದ ತಪ್ಪಿಸಿಕೊಂ­ಡಿರುವ ಶಿಕ್ಷಕ “ಬಂದೂಕು ತೋರಿಸಿ ಬೆದರಿಸಿ ಮದುವೆ ಮಾಡಿಕೊಡಲಾಗಿದೆ ಎಂದಿದ್ದಾನೆ. ಪುರುಷರ ಒಪ್ಪಿಗೆಯಿಲ್ಲದ್ದಿದ್ದರೂ, ಅವರನ್ನು ಬೆದರಿಸಿ ನಡೆಸಲಾ­ಗು­ತ್ತಿರುವ ಈ ವಿವಾಹ ಪದ್ಧತಿಯು “ಪಕಡ್ವಾ ವಿವಾಹ್‌’ ಎಂದೇ ಕುಖ್ಯಾತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next