Advertisement

ಹೆಚ್ಚುತ್ತಿರುವ ಕೋವಿಡ್ ಪ್ರಕರಣ ! ಈ ಬಾರಿಯ ಮರವಂತೆ ಜಾತ್ರೆ ರದ್ದು

02:49 PM Jul 11, 2020 | sudhir |

ಕುಂದಾಪುರ: ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಜು.20 ರಂದು ನಡೆಯಬೇಕಿದ್ದ ಈ ವರ್ಷದ ಆಷಾಢ ಅಮಾವಾಸ್ಯೆ ಜಾತ್ರೆ (ಮರವಂತೆ ಜಾತ್ರೆ) ಯು ರದ್ದುಗೊಂಡಿದೆ.

Advertisement

ಪ್ರತಿ ವರ್ಷ ಆಷಾಢ ಅಮಾವಾಸ್ಯೆಯಂದು ವಿಜೃಂಭಣೆಯಿಂದ ನಡೆಯುತ್ತಿದ್ದ ಮರವಂತೆ ಜಾತ್ರೆಗೆ ಈ ಬಾರಿ ಕೋವಿಡ್ ಕರಿನೆರಳು ಅಡ್ಡಿಯಾಗಿದೆ. ಧಾರ್ಮಿಕ ಕಾರ್ಯಕ್ರಮಗಳು, ಶುಭ ಸಮಾರಂಭಗಳಲ್ಲಿ ಹೆಚ್ಚು ಜನರನ್ನು ಸೇರಿಸಬಾರದು ಎನ್ನುವ ಜಿಲ್ಲಾಧಿಕಾರಿಗಳ ಆದೇಶವಿದ್ದು, ಹಾಗಾಗಿ ಜಾತ್ರೆಗೆ ಬೇರೆ ಬೇರೆ ಕಡೆಯಿಂದ ಸಾವಿರಾರು ಮಂದಿ ಬರುವ ನಿರೀಕ್ಷೆ ಇರುವುದರಿಂದ ಈ ಬಾರಿಯ ಜಾತ್ರೆಯನ್ನು ರದ್ದುಗೊಳಿಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿದೆ.

ಜಾತ್ರೆಯ ಪ್ರಯುಕ್ತ ಸಮಿತಿ ಪದಾಧಿಕಾರಿಗಳು, ಅರ್ಚಕ ವೃಂದದಿಂದ ಸರಳವಾಗಿ ಧಾರ್ಮಿಕ ವಿಧಿ- ವಿಧಾನಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಹೆಬ್ಟಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next