ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ವಾಮನ ಕಾಮತ್ ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರೇಮ, ತ್ಯಾಗ ಹಾಗೂ ಕಾರುಣ್ಯಭರಿತ ಹೃದಯ ವಾತ್ಸಲ್ಯದ ಸೇವೆಯ ಮೂಲಕ ಹಲವಾರು ಸಮಾಜಮುಖೀ ಯೋಜನೆಗಳೊಂದಿಗೆ ಹಗಲಿರುಳೆನ್ನದೆ ಶ್ರಮಿಸುವ ಅಮ್ಮ ಜನತೆಯ ಪಾಲಿಗೆ ಮಮತೆಯ ಮಾತೆಯಾಗಿದ್ದಾರೆ ಎಂದರು.
Advertisement
ಸಂಜೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಶ್ರೀಪಾದ್ ಯಸೊÕà ನಾೖಕ್, ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ, ಗೌರವ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ, ವಿಪಕ್ಷದ ಮುಖ್ಯಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಮೇಯರ್ ಹರಿನಾಥ್ ಭಾಗವಹಿಸಲಿದ್ದಾರೆ ಎಂದರು.
Related Articles
ಈ ಬಾರಿ ಅಮ್ಮ ಮಂಗಳೂರಿನಲ್ಲಿ ಒಂದು ದಿನ ಮಾತ್ರ ದರ್ಶನ ನೀಡಲಿದ್ದು, ಸುಮಾರು 20,000 ಮಂದಿ
ಭಾಗವಹಿಸುವ ನಿರೀಕ್ಷೆ ಇದೆ. ಫೆ. 25ರಂದು ಉಡುಪಿಯ ಕಾರ್ಯ ಕ್ರಮದಲ್ಲಿ ಅಮ್ಮ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವೈಯಕ್ತಿಕ ದರ್ಶನ ನೀಡಲಿದ್ದು, ಅದಕ್ಕಾಗಿ ಪ್ರತಿಯೊಬ್ಬರಿಗೂ ಸ್ಥಳದಲ್ಲೇ ಉಚಿತ ಟೋಕನ್ ನೀಡ ಲಾಗುತ್ತದೆ. ಬಳಿಕ ಅನ್ನಸಂತರ್ಪಣೆಯ ವ್ಯವಸ್ಥೆ ಇರುತ್ತದೆ. ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಕ್ಯಾಂಟೀನ್ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ನಗರದ ಬಸ್, ರೈಲು ನಿಲ್ದಾಣದಿಂದ ಸಾರಿಗೆ ವ್ಯವಸ್ಥೆ, ದೂರದ ಭಕ್ತರಿಗೆ ವಸತಿ ವ್ಯವಸ್ಥೆಯೂ ಇರುತ್ತದೆ ಎಂದು ತಿಳಿಸಿದರು.
Advertisement
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷೆ ಶ್ರುತಿ ಸನತ್ ಹೆಗ್ಡೆ, ಕಾರ್ಯದರ್ಶಿ ಡಾ| ಅಶೋಕ್ ಶೆಣೈ, ಸ್ವಾಗತ ಸಮಿತಿಯ ಬದ್ರಿನಾಥ್ ಕಾಮತ್, ಮಾಧ್ಯಮ ಸಂಚಾಲಕ ಮಾಧವ ಸುವರ್ಣ ಉಪಸ್ಥಿತರಿದ್ದರು.
ದಿನಪೂರ್ತಿ ಕಾರ್ಯಕ್ರಮಫೆ. 22ರಂದು ರಾತ್ರಿ ಅಮ್ಮ ಮಂಗಳೂರಿಗೆ ಆಗಮಿಸಲಿದ್ದು, ಫೆ. 23ರಂದು ಸಂಜೆ 6ರಿಂದ ಸತ್ಸಂಗ- ಭಜನೆ, ಪ್ರವಚನ, ಮಾನಸ ಪೂಜೆ, ಧ್ಯಾನ ಮತ್ತು ವೈಯಕ್ತಿಕ ದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಅಂಗ ವಾಗಿ ಬ್ರಹ್ಮಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದ್ದು, ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಭಗವತಿ ಸೇವೆ, ಮಹಾಸುದರ್ಶನ ಹೋಮ, ಅಲಂಕಾರ ಪೂಜೆ ನಡೆಯಲಿದೆ.