Advertisement

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

01:03 AM Jan 10, 2025 | Team Udayavani |

ಉಡುಪಿ: ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದಲ್ಲಿ ಸಪ್ತೋತ್ಸವದ ಪ್ರಯುಕ್ತ ಭಜನೆ ಸಂಕೀರ್ತನೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.

Advertisement

ಉಡುಪಿ ತಾಲೂಕಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಕುತ್ಪಾಡಿಯ ಕಲಾಸಂಗಮ ಭಜನ ಮಂಡಳಿ, ಮುದ್ರಾಡಿಯ ಶ್ರೀ ವೀರಭದ್ರ ಭಜನ ಮಂಡಳಿ, ಇಂದ್ರಾಳಿಯ ಶ್ರೀ ಮಹಿಷಮರ್ದಿನಿ ಮಹಿಳಾ ಭಜನ ಮಂಡಳಿಯವರು ಭಾಗವಹಿಸಿದ್ದರು.

ಶ್ರೀಮಠದ ದಿವಾನ ರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಪ್ರಮುಖರಾದ ಹರಿಕೃಷ್ಣ ಶಿವತ್ತಾಯ, ಕೇಶವ ಆಚಾರ್ಯ ದೊಡ್ಡನಗುಡ್ಡೆ, ವಿಜಯ ಶೆಟ್ಟಿ ಕೊಂಡಾಡಿ, ಶಿವಕುಮಾರ್‌ ಅಂಬಲ ಪಾಡಿ, ರತ್ನಾಕರ್‌ ಶೆಟ್ಟಿಗಾರ್‌ ಇಂದ್ರಾಳಿ, ಸತೀಶ್‌ಕುಮಾರ್‌, ಪ್ರಶಾಂತ್‌ ಅಂಜಾರ್‌, ಶಂಕರಾಚಾರ್ಯ, ದಿಲೀಪ್‌ ಸಂಗಡಿಗರು ಸಹಕರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next