Advertisement

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

11:34 PM May 25, 2022 | Team Udayavani |

ಢಾಕಾ: ಆತಿಥೇಯ ಬಾಂಗ್ಲಾದೇಶ ಎದುರಿನ ಢಾಕಾ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಂಗ್‌ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ. ಬಾಂಗ್ಲಾದ 365 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ 5ಕ್ಕೆ 282 ರನ್‌ ಮಾಡಿ 3ನೇ ದಿನದಾಟ ಮುಗಿಸಿದೆ.

Advertisement

ಶ್ರೀಲಂಕಾ ಸರದಿಯಲ್ಲಿ ನಾಲ್ವರಿಂದ ಅರ್ಧ ಶತಕ ದಾಖಲಾಯಿತು. ಆರಂಭಿಕರಾದ ಒಶಾದ ಫೆರ್ನಾಂಡೊ 57, ದಿಮುತ್‌ ಕರುಣಾರತ್ನೆ 80 ರನ್‌ ಬಾರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಮೊದಲ ವಿಕೆಟಿಗೆ 95 ರನ್‌ ಒಟ್ಟುಗೂಡಿತು. ಮಧ್ಯಮ ಕ್ರಮಾಂಕದಲ್ಲಿ ಸಣ್ಣದೊಂದು ಕುಸಿತ ಕಂಡ ಬಳಿಕ ಏಂಜೆಲೊ ಮ್ಯಾಥ್ಯೂಸ್‌ ಮತ್ತು ಧನಂಜಯ ಡಿ ಸಿಲ್ವ ಹೋರಾಟ ಮುಂದುವರಿಸಿದರು. 5ನೇ ವಿಕೆಟಿಗೆ 102 ರನ್‌ ಒಟ್ಟುಗೂಡಿತು. ಇಬ್ಬರದೂ 58 ರನ್‌ ಗಳಿಕೆ. ಇವರಲ್ಲಿ ಮ್ಯಾಥ್ಯೂಸ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಒಂದು ಹಂತದಲ್ಲಿ 24 ರನ್‌ ಮಾಡುವಷ್ಟರಲ್ಲಿ 5 ವಿಕೆಟ್‌ ಕಳೆದು ಕೊಂಡಿತ್ತು. ಆದರೆ ಮುಶ್ಫಿಕರ್‌ ರಹೀಂ ಅಜೇಯ 175 ರನ್‌ (355 ಎಸೆತ, 21 ಬೌಂಡರಿ) ಮತ್ತು ಲಿಟನ್‌ ದಾಸ್‌ 141 ರನ್‌ (246 ಎಸೆತ, 16 ಬೌಂಡರಿ, 1 ಸಿಕ್ಸರ್‌) ಬಾರಿಸಿ ಅಮೋಘ ಪ್ರತಿಹೋರಾಟ ಸಂಘಟಿಸಿದರು. 6ನೇ ವಿಕೆಟಿಗೆ 271 ರನ್‌ ಒಟ್ಟುಗೂಡಿತು. ಶ್ರೀಲಂಕಾ ಪರ ಕಸುನ್‌ ರಜಿತ 5 ಹಾಗೂ ಅಸಿತ ಫೆರ್ನಾಂಡೊ 4 ವಿಕೆಟ್‌ ಕೆಡವಿದರು.

Advertisement

Udayavani is now on Telegram. Click here to join our channel and stay updated with the latest news.

Next