Advertisement

ತೆರೆದ ಬಸ್‌ನಲ್ಲಿ ಲಂಕಾ ಆಟಗಾರರ ವಿಜಯೋತ್ಸವ

10:58 PM Sep 13, 2022 | Team Udayavani |

ಕೊಲಂಬೊ: ಬಲಿಷ್ಠ ಪಾಕಿಸ್ಥಾನವನ್ನು ಮಣಿಸಿ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಪ್ರಶಸ್ತಿ ಗೆದ್ದ ಶ್ರೀಲಂಕಾ ತಂಡವು ಮಂಗಳವಾರ ಕೊಲಂಬೊಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು. ವಿಮಾನನಿಲ್ದಾಣದಲ್ಲಿ ತಂಡದ ಸದಸ್ಯರಿಗೆ ಆತ್ಮೀಯವಾಗಿ ಸ್ವಾಗತ ನೀಡಲಾಯಿತು. ಆಬಳಿಕ ತರೆದ ಬಸ್‌ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಯಿತು.

Advertisement

ಫೈನಲ್‌ನಲ್ಲಿ ಭಾನುಕ ರಾಜಪಕ್ಷೆ ಅವರ ಅಮೋಘ ಅರ್ಧಶತಕ ಹಾಗೂ ಸ್ಪಿನ್ನರ್‌ ವನಿಂದು ಹಸರಂಗ ಮತ್ತು ಪ್ರಮೋದ್‌ ಮದುಶನ್‌ ಅವರ ಉತ್ತಮ ಆಟದಿಂದಾಗಿ ಶ್ರೀಲಂಕಾವು ಪಾಕಿಸ್ಥಾನವನ್ನು 23 ರನ್ನುಗಳಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು. ವಿಜಯಿ ಲಂಕಾ ಆಟಗಾರರು ಕೊಲಂಬೊಗೆ ಆಗಮಿಸಿದಾಗ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು. ಪ್ರಮುಖ ರಸ್ತೆಯಲ್ಲಿ ತೆರೆದ ಬಸ್‌ನಲ್ಲಿ ಸಾಗಿದಾಗ ರಸ್ತೆಯ ಎರಡೂ ಕಡೆ ಅಭಿಮಾನಿಗಳು ಕೈಬೀಸಿ ಆಟಗಾರರನ್ನು ಬೆಂಬಲಿಸಿದರು.

ಶ್ರೀಲಂಕಾ ಕ್ರಿಕೆಟ್‌ ಕೂಡ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಜಯೋತ್ಸವದ ಚಿತ್ರಗಳನ್ನು ಹಾಕಿ ಸಂಭ್ರಮಿಸಿತು. ಏಷ್ಯನ್‌ ಚಾಂಪಿಯನ್‌ ಶ್ರೀಲಂಕಾ ತಂಡಕ್ಕೆ ಭವ್ಯವಾದ ಸ್ವಾಗತ ಎಂದು ಟ್ವಿಟರ್‌ನಲ್ಲಿ ಬರೆದು ಆಟಗಾರರನ್ನು ಸ್ವಾಗತಿಸಲಾಯಿತು.

ವಿಶ್ವಕಪ್‌ ಸಿದ್ಧತೆಗೆ ನೆರವು
ಏಷ್ಯಾಕಪ್‌ ಗೆಲುವು ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನ ಸಿದ್ಧತೆಗೆ ಬಹಳಷ್ಟು ನೆರವು ನೀಡಲಿದೆ ಎಂದು ಶ್ರೀಲಂಕಾ ತಂಡದ ನಾಯಕ ದಾಸುನ್‌ ಶನಕ ಹೇಳಿದ್ದಾರೆ. ಈ ವರ್ಷ ಟಿ20 ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡವು ಟಿ20 ವಿಶ್ವಕಪ್‌ನ ಮುಖ್ಯ ಸ್ಪರ್ಧೆಗೆ ಇನ್ನಷ್ಟೇ ಅರ್ಹತೆ ಗಳಿಸಬೇಕಾಗಿದೆ.

ನಮ್ಮ ಕ್ರಿಕೆಟಿಗರನ್ನು ನಂಬಿ. ಅವರು ಉತ್ತಮ ನಿರ್ವಹಣೆ ನೀಡಲು ಸಮರ್ಥರಿದ್ದಾರೆ ಎಂದು ತಿಳಿಸಿದರು.

Advertisement

ಏಷ್ಯಾ ಕಪ್‌ನ ಸಾಧನೆಯಿಂದ ಶ್ರೀಲಂಕಾ ಕ್ರಿಕೆಟ್‌ ಮುಂದಿನ ದಿನಗಳಲ್ಲಿ ಬಹಳಷ್ಟು ಎತ್ತರಕ್ಕೆ ಏರುವ ಸಾಧ್ಯತೆಯಿದೆ. ಇದು ನಮ್ಮ ಕ್ರಿಕೆಟ್‌ನ ತಿರುವು ಆಗಿರಬಹುದು. ಇದು ನಿಜಯವಾಗಿಯೂ ಶುಭ ಸಂಕೇತ
ವಾಗಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next