Advertisement

ಭುಗಿಲೆದ್ದ ಹಿಂಸಾಚಾರ, ಪ್ರತಿಭಟನೆ; ಶ್ರೀಲಂಕಾದಲ್ಲಿ ಮತ್ತೆ ತುರ್ತುಪರಿಸ್ಥಿತಿ ಘೋಷಣೆ

02:14 PM Jul 13, 2022 | Team Udayavani |

ಕೊಲಂಬೊ: ದ್ವೀಪರಾಷ್ಟ್ರದ ಅಧ್ಯಕ್ಷ ಗೊಟಬಯಾ ರಾಜಪಕ್ಸ ದೇಶ ಬಿಟ್ಟು ಮಾಲ್ಡೀವ್ಸ್ ಗೆ ಪರಾರಿಯಾದ ಬೆನ್ನಲ್ಲೇ ಹಿಂಸಾಚಾರ, ಪ್ರತಿಭಟನೆ ತಾರಕಕ್ಕೇರಿದ್ದು, ಏತನ್ಮಧ್ಯೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪ್ರಧಾನಿ ಕಚೇರಿ ಬುಧವಾರ (ಜುಲೈ 13) ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಸುಶಾಂತ್ ಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದದ್ದು ರಿಯಾ ಚಕ್ರವರ್ತಿ: NCB ಆರೋಪಪಟ್ಟಿ

ರಾಜಧಾನಿ ಕೊಲಂಬೊದಲ್ಲಿ ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ ಅವರ ನಿವಾಸದೊಳಕ್ಕೆ ಪ್ರವೇಶಿಸಲು ಪ್ರತಿಭಟನಾಕಾರರು ಯತ್ನಿಸುತ್ತಿದ್ದು, ಭದ್ರತಾ ಪಡೆ ಸಿಬಂದಿಗಳು ಅಶ್ರುವಾಯು ಪ್ರಯೋಗಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿರುವುದಾಗಿ ವರದಿ ವಿವರಿಸಿದೆ.

ಪ್ರಧಾನಿ ನಿವಾಸದ ಭದ್ರತಾ ನಿಯಮವನ್ನು ಉಲ್ಲಂಘಿಸಿ ಉದ್ರಿಕ್ತ ನೂರಾರು ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಆವರಣದೊಳಕ್ಕೆ ನುಗ್ಗಿರುವುದಾಗಿ ಎಎನ್ ಐ ವರದಿ ಮಾಡಿದೆ.

ನಮ್ಮ ಸಂವಿಧಾಣದ ಪ್ರಕಾರ ಒಂದು ವೇಳೆ ದೇಶದ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ಪ್ರಧಾನಿ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಆದರೆ ಪ್ರಧಾನಿ ವಿಕ್ರಮಸಿಂಘೆ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಸಲಹೆಗಾರರೊಬ್ಬರು ಎಎನ್ ಐಗೆ ತಿಳಿಸಿದ್ದಾರೆ.

Advertisement

ಶ್ರೀಲಂಕಾ ಪ್ರಧಾನಿ ನಿವಾಸದ ಹೊರಭಾಗದಲ್ಲಿ ಸೇನಾ ಪಡೆ ನಿಯೋಜಿಸಲಾಗಿದೆ. ವರದಿಗಳ ಪ್ರಕಾರ, 73 ವರ್ಷದ ಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸ, ಪತ್ನಿ ಹಾಗೂ ಇಬ್ಬರು ಅಂಗರಕ್ಷರ ಜೊತೆ ಶ್ರೀಲಂಕಾದ ವಾಯುಪಡೆ ವಿಮಾನದ ಮೂಲಕ ಮಾಲ್ಡೀವ್ಸ್ ಗೆ ಪರಾರಿಯಾಗಿರುವುದಾಗಿ ವರದಿ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next