Advertisement

ದ್ವಿತೀಯ ಟೆಸ್ಟ್‌ : ಶ್ರೀಲಂಕಾ 338 ಆಲೌಟ್‌; ದಿನೇಶ್‌ ಚಂಡಿಮಾಲ್‌ ಶತಕ

10:48 AM Mar 17, 2017 | Team Udayavani |

ಕೊಲಂಬೊ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವು 338 ರನ್‌ ಗಳಿಸಿ ಆಲೌಟಾಗಿದೆ. 

Advertisement

ಇದಕ್ಕುತ್ತರವಾಗಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಬಾಂಗ್ಲಾದೇಶವು ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದು 214 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಪ್ರವಾಸಿ ತಂಡ ಇನ್ನೂ 124 ರನ್‌ ಗಳಿಸಬೇಕಾಗಿದೆ.

7 ವಿಕೆಟಿಗೆ 238 ರನ್ನಿನಿಂದ ದ್ವಿತೀಯ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡವನ್ನು ಚಂಡಿಮಾಲ್‌ ಆಧ ರಿಸಿದರು. ಅವರ ಸೊಗಸಾದ ಶತಕದಿಂದಾಗಿ ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು. 86 ರನ್ನಿನಿಂದ ಆಟ ಮುಂದುವರಿಸಿದ ಚಂಡಿಮಾಲ್‌ ಟೆಸ್ಟ್‌ನಲ್ಲಿ 8ನೇ ಶತಕ ದಾಖಲಿಸಿ ಸಂಭ್ರಮಿಸಿದರು. 9ನೆಯವರಾಗಿ ಔಟಾ ಗುವ ಮೊದಲು 300 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 138 ರನ್‌ ಗಳಿಸಿದರು. ಚಂಡಿಮಾಲ್‌ ಬಾಲಂಗೋಚಿಗಳ ನೆರವಿ ನಿಂದ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಲು ಯಶಸ್ವಿ ಯಾದರು. 195 ರನ್‌ ತಲುಪಿದಾಗ ತಂಡ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಅಂತಿಮ ಮೂರು ವಿಕೆಟ್‌ ಕಳೆದುಕೊಂಡಾಗ ತಂಡ 143 ರನ್‌ ಪೇರಿಸಿತ್ತು. ಇದರಿಂದಾಗಿ ತಂಡ 338 ರನ್‌ ಗಳಿಸಿ ಆಲೌಟಾಯಿತು.

ಬಾಂಗ್ಲಾ ದಿಟ್ಟ ಉತ್ತರ: ಈ ಟೆಸ್ಟ್‌ ಬಾಂಗ್ಲಾ ಪಾಲಿಗೆ 100ನೇ ಟೆಸ್ಟ್‌ ಪಂದ್ಯವಾಗಿದೆ. ಈ ಐತಿಹಾಸಿಕ ಪಂದ್ಯ ದಲ್ಲಿ ಬಾಂಗ್ಲಾದ ಆರಂಭಿಕರಾದ ತಮಿಮ್‌ ಇಕ್ಬಾಲ್‌ ಮತ್ತು ಸೌಮ್ಯ ಸರ್ಕಾರ್‌ ಮೊದಲ ವಿಕೆಟಿಗೆ 95 ರನ್ನು ಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡಕ್ಕೆ ಆಸರೆ ಯಾಗಿದ್ದಾರೆ. 49 ರನ್‌ ಗಳಿಸಿದ ಇಕ್ಬಾಲ್‌ ಮೊದಲಿಗ ರಾಗಿ ಔಟಾದರು. ಸರ್ಕಾರ್‌ ಮತ್ತು ಇಮ್ರುಲ್‌ ಕಯಿಸ್‌ ಮತ್ತೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಇವರಿಬ್ಬರ ಪತನದ ಬಳಿಕ ತಂಡ ಮತ್ತೆ ಎರಡು ವಿಕೆಟನ್ನು ಬೇಗನೇ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಸಿಲುಕಿತು.
ದಿನದಾಟದ ಅಂತ್ಯಕ್ಕೆ ತಂಡ 5 ವಿಕೆಟಿಗೆ 214 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ತಂಡ 124 ರನ್‌ ಗಳಿಸಬೇಕಾಗಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 338 (ದಿನೇಶ್‌ ಚಂಡಿಮಾಲ್‌ 138, ದನಂಜಯ ಡಿ’ಸಿಲ್ವ 34, ನಿರೋಶಾನ್‌ ಡಿಕ್ವೆಲ್ಲ 34, ರಂಗನ ಹೆರಾತ್‌ 25, ಸುರಂಕ ಲಕ್ಮಲ್‌ 35, ಮುಸ್ತಾಫಿಜುರ್‌ ರೆಹಮಾನ್‌ 50ಕ್ಕೆ 2, ಸುಭಾಷಿಷ್‌ ರಾಯ್‌ 53ಕ್ಕೆ 2, ಮೆಹದಿ ಹಸನ್‌ ಮಿರಾಜ್‌ 90ಕ್ಕೆ 3, ಶಕಿಮ್‌ ಅಲ್‌ ಹಸನ್‌ 80ಕ್ಕೆ 2); ಬಾಂಗ್ಲಾದೇಶ 5 ವಿಕೆಟಿಗೆ 214 (ತಮಿಮ್‌ ಇಕ್ಬಾಲ್‌ 49, ಸೌಮ್ಯ ಸರ್ಕಾರ್‌ 61, ಇಮ್ರುಲ್‌ ಕಯಿಸ್‌ 34, ಶಬ್ಬೀರ್‌ ರೆಹಮಾನ್‌ 42, ಲಕ್ಷಣ್‌ ಸಂಡಕನ್‌ 65ಕ್ಕೆ 3).
 

Advertisement
Advertisement

Udayavani is now on Telegram. Click here to join our channel and stay updated with the latest news.

Next