Advertisement

ಕಾಫಿ ಡೇ ಅವ್ಯವಹಾರ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲ : ಹಿರೇಮಠ ಆರೋಪ

09:58 AM Nov 26, 2020 | sudhir |

ಹುಬ್ಬಳ್ಳಿ: ಕಾಫಿ ಡೇ ಸಾರ್ವಜನಿಕ ಕಂಪನಿಯಲ್ಲಿ ವಂಚನೆ ನಡೆದಿದೆ ಎಂದು ಅಶೋಕ ಕುಮಾರ ಮಲ್ಹೋತ್ರಾ ವರದಿ ತಿಳಿಸಿದ್ದು, ಕಂಪನಿಯ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೊಕೇಶನ್‌, ಡಾರ್ಕ್‌ ಫೈಬರ್‌ ಹಗರಣ, ಅನುಮಾನಸ್ಪದ ಹಣ ವರ್ಗಾವಣೆ, ಬ್ಯಾಂಕ್‌ ಸಾಲ, ಸಾರ್ವಜನಿಕ ಹಣದ ದುರುಪಯೋಗ ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆ ನಡೆಯುತ್ತಿಲ್ಲ.

ಹಿಂದೆ ಇದೇ ರೀತಿ ವಂಚನೆ ಮಾಡಿದ್ದ ಸತ್ಯಂ ಕಂಪ್ಯೂಟರ್ ಕಂಪನಿ ವಿರುದ್ಧ ಸಿಬಿಐ, ಇಡಿ ತನಿಖೆ ನಡೆಸಿ ತಾರ್ಕಿಕ ಅಂತ್ಯ ನೀಡಿತ್ತು. ಅದರಂತೆ ಇಲ್ಲಿಯೂ ಪ್ರಾಮಾಣಿಕ ತನಿಖೆ ಕೈಗೊಳ್ಳಬೇಕಾಗಿದೆ. ಇದರ ಹಿಂದೆ ಕಾಣದ ಕೈಗಳು ರಕ್ಷಿಸುವ ಕೆಲಸ ಮಾಡುತ್ತಿವೆ.

ಇದನ್ನೂ ಓದಿ:ಆರೋಗ್ಯದಲ್ಲಿ ಏರುಪೇರು: ಮಾಜಿ ಸಚಿವ ರೋಷನ್ ಬೇಗ್ ಆಸ್ಪತ್ರೆಗೆ ದಾಖಲು

ಸುಮಾರು 60,000 ಕೋಟಿ ರೂ. ಅವ್ಯವಹಾರ ಆಗಿರುವ ಸಾಧ್ಯತೆಗಳಿದ್ದು, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ
ತೆಗೆದುಕೊಂಡಿಲ್ಲ. ಅಶೋಕ ಮಲ್ಲೋತ್ರಾ ವರದಿ ಅವ್ಯವಹಾರ ವಿರುದ್ಧ ತನಿಖೆ ಕೈಗೊಳ್ಳಲು ಅನುಕೂಲವಾಗಿದ್ದು, ತಪ್ಪಿಸ್ಥರ
ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತವಾಗಿದೆ.

Advertisement

ಈ ಕುರಿತು ಪ್ರಧಾನಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಸಮಾಜ ಪರಿವರ್ತನಾ ಸಮುದಾಯ ಪ್ರತ್ರ ಬರೆದಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಒತ್ತಾಯಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next