Advertisement

ಸ್ಪ್ರಿಂಗ್‌ ಆನಿಯನ್‌….ಹಲವು ರೋಗಕ್ಕೆ ರಾಮಬಾಣ

11:20 PM Mar 02, 2020 | Sriram |

ಸ್ಪ್ರಿಂಗ್‌ ಆನಿಯನ್‌ ಅಥವಾ ವಸಂತ ಈರುಳ್ಳಿ ಎಂದೇ ಕರೆಯಲ್ಪಡುವ ಇದು ಬಿಳಿ ಹಸುರು ಮಿಶ್ರಿತ ಈರುಳ್ಳಿ ತಳಿಗೆ ಸೇರಿದ ಒಂದು ಸಸ್ಯ ಜಾತಿ. ನಾವು ದೈನಂದಿನ ಅಡುಗೆಗೆ ಬಳಸುವ ಕೆಂಪು ಈರುಳ್ಳಿಗಿಂತ ಇದು ಕಡಿಮೆ ಖಾರ ಮತ್ತು ಹೆಚ್ಚು ರುಚಿಯನ್ನು ಹೊಂದಿದೆ. ಮುಖ್ಯವಾಗಿ ಸೂಪ್‌, ನೂಡಲ್‌, ಫ್ರೈಡ್‌ರೈಸ್‌ಗಳಲ್ಲಿ ಇದರ ಬಳಕೆ ಹೆಚ್ಚು. ಇದರ ಹಸುರು ಮತು ಬಿಳಿಯ ಭಾಗವು ಅತೀ ಹೆಚ್ಚು ಪೋಷಕಾಂಶ ಹೊಂದಿದ್ದು. ಇದನ್ನು ಬೇಯಿಸಿ ಇಲ್ಲವೇ ಹಾಗೇ ಸೇವಿಸಬಹುದು.

Advertisement

ಪ್ರಯೋಜನಗಳು
ಅತೀ ಹೆಚ್ಚು ಪೋಷಕಾಂಶಗಳಿಂದ ಕೂಡಿರುವ ಈ ಎಳೆಯ ಈರುಳ್ಳಿ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಅತ್ಯುತ್ತಮ. ಸಂಶೋಧನೆಯೊಂದರ ಪ್ರಕಾರ ಇದು ಕ್ಯಾನ್ಸರ್‌ ರೋಗಕ್ಕೂ ಔಷಧವಾಗಿ ಬಳಕೆಯಲ್ಲಿದೆ.

ಕ್ಯಾನ್ಸರ್‌ ಅಪಾಯ ಕಡಿಮೆ
ಸ್ಪ್ರಿಂಗ್‌ ಆನಿಯನ್‌ ಸಲ#ರ್‌ ಅಂಶಗಳನ್ನು ಹೊಂದಿದ್ದು, ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ವಿದೆ. ಇದು ಕ್ಯಾನ್ಸರ್‌ ಕೋಶಗಳನ್ನು ಉತ್ಪತ್ತಿ ಮಾಡುವ ಕಿಣ್ವಗಳ ವಿರುದ್ಧ ಹೋರಾಟ ಮಾಡಿ ಕ್ಯಾನ್ಸರ್‌ನಿಂದ ದೇಹಕ್ಕೆ ರಕ್ಷಣೆ ಒದಗಿಸುತ್ತದೆ. ಹೀಗಾಗಿ ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚು ಹೆಚ್ಚು ಇದನ್ನು ಸೇವಿಸುವುದು ಸಹಾಯಕವಾಗಿದೆ.

ಸಕ್ಕರೆ ಕಾಯಿಲೆ ದೂರ
ಜಗತ್ತಿನಲ್ಲಿ ಬೃಹದಾಕಾರವಾಗಿ ಬೆಳೆದಿರುವ ಕಾಯಿಲೆಗಳಲ್ಲಿ ಸಕ್ಕರೆ ಕಾಯಿಲೆಯೂ ಒಂದು. ಹೀಗಾಗಿ ಈ ಈರುಳ್ಳಿಯಲ್ಲಿರುವ ಸಲ#ರ್‌ ಸಂಯುಕ್ತಗಳು ದೇಹದಲ್ಲಿ ಇನ್ಸುಲಿನ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಮಧುಮೇಹವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆ ಉತ್ತಮ
ಸ್ಪ್ರಿಂಗ್‌ ಆನಿಯನ್‌ ಜೀರ್ಣಕ್ರಿಯಯನ್ನು ಉತ್ತಮಗೊಳಿಸುತ್ತದೆ. ಊಟದಲ್ಲಿ ಇತರ ತರಕಾರಿಗಳ ಜತೆಗೆ ಇದನ್ನು ಬಳಸುವುದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳ ಜತೆಗೆ ಜೀರ್ಣಕ್ರಿಯೆಯನ್ನು ಸರಿಯಾಗಿಸಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ.

Advertisement

ದೃಷ್ಟಿ ಕಾಪಾಡುತ್ತದೆ
ಸ್ಪ್ರಿಂಗ್‌ ಆನಿಯನ್‌ನಲ್ಲಿ ವಿಟಮಿನ್‌ ಎ ಹೇರಳವಾಗಿದ್ದು, ಇದರ ಅತೀ ಹೆಚ್ಚು ಸೇವನೆಯಿಂದ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಶೀತ, ಜ್ವರದಿಂದ ರಕ್ಷಣೆ
ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಹೇರಳವಾಗಿದ್ದು, ವೈರಲ್‌ ಜ್ವರ, ಫ‌ೂÉ ಜ್ವರಗಳ ವಿರುದ್ಧ ಹೋರಾಡುತ್ತದೆ. ಶೀತಕ್ಕೂ ಇದು ಉತ್ತಮ ಔಷಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next