ಚಿಂಚೋಳಿ: ತಾಲೂಕಿನ ಕುಂಚಾವರಂ ಮೀಸಲು ವನ್ಯಜೀವಿಧಾಮ ಅರಣ್ಯ ಪ್ರದೇಶಕ್ಕೆ ಒಳಪಟ್ಟಿರುವ ಲಚಮಾಸಾಗರ ಅರಣ್ಯಪ್ರದೇಶದಲ್ಲಿ ಚುಕ್ಕೆಜಿಂಕೆ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕುಂಚಾವರಂ ವನ್ಯಜೀವಿಧಾಮ ವಲಯ ಅರಣ್ಯಾಧಿಕಾರಿ ಸಂಜೀವಿಕುಮಾರ ಚವ್ಹಾಣ ತಿಳಿಸಿದ್ದಾರೆ.
ಕುಂಚಾವರಂ ಗ್ರಾಮದ ರಾಜುಯಲ್ಲಪ್ಪ ಬಂಧಿ ತ ಆರೋಪಿಯಾಗಿದ್ದು, ಇನ್ನಿಬ್ಬರು ಆರೋಪಿಗಳಾದ ಶೇಖರ
ಗಂಗಣ್ಣ ಗೊಲ್ಲ ಕುಂಚಾವರಂ, ತಾಟಿ ಜನಾರ್ಧನ ಅಂತಯ್ಯ ಕುಂಚಾವರಂ ಪರಾರಿಯಾಗಿದ್ದಾರೆ. ಕುಂಚಾವರಂ
ವನ್ಯಜೀವಿಧಾಮದಲ್ಲಿ ಪ್ರಕರಣ ದಾಖಲಿ ಸಿಕೊಳ್ಳಲಾಗಿದೆ.
ಘಟನೆ ವಿವರ: ಲಚಮಾಸಾಗರ ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಅಕ್ರಮವಾಗಿ ಪ್ರವೇಶಿಸಿ ತಂತಿಬೇಲಿ ಹಾಕಿ ಚುಕ್ಕೆಜಿಂಕೆ ಬೇಟೆಯಾಡಿ ಕೊಂದು, ಮಾಂಸ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕುಂಚಾವರಂ ವಲಯ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ಆರೋಪಿಯಿಂದ 17ಪ್ಲಾಸ್ಟಿಕ್ ಬ್ಯಾಗ್‌ನಲ್ಲಿದ್ದ ಹಸಿಮಾಂಸ ಮತ್ತು ಚುಕ್ಕೆ ಜಿಂಕೆ ಚರ್ಮ, ಹರಿತವಾದ ಆಯುಧ, ಬೈಂಡಿಂಗ್ ವೈರ್, ಮೂರು ಬೈಕ್‌ಗಳನ್ನು ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಕುಂಚಾವರಂ ಗ್ರಾಮದ ಶೇಖರ ಗಂಗಣ್ಣ ಗೊಲ್ಲ ಎನ್ನುವಾತ ಪೆಂಗೋಲಿನ್ ಕಾಡುಪ್ರಾಣಿ ಬೇಟೆ ಯಾಡಿ ಕೊಂದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ.ಬಾವಿಕಟ್ಟಿ, ಸಹಾಯಕ ಅರಣ್ಯಾಧಿಕಾರಿ ಸುನೀಲ ಚವ್ಹಾಣ ಮಾರ್ಗದರ್ಶನದಲ್ಲಿ ಸಂಜೀವಕುಮಾರ ಚವ್ಹಾಣ ವಲಯ ಅರಣ್ಯಾ ಧಿಕಾರಿಗಳ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳಾದ ಭಾನುಪ್ರತಾಪಸಿಂಗ್ ಚವ್ಹಾಣ, ಗಜಾನಂದ, ಸಿದ್ಧಾರೂಢ ಹೊಕ್ಕುಂಡಿ, ನಟರಾಜ ಚವ್ಹಾಣ, ಪ್ರಭು ಜಾಧವ, ಚೇತನ, ಸೈಯದ್ ಪಟೇಲ, ಶೇಖ ಅಮೆರ್, ಹಾಲೇಶ, ಮೆಹಮೂಬ ಅಲಿ, ಲಿಂಬಾಜಿ ಮನ್ನು, ಶಂಕರ, ಕಿಶನ್ ಇನ್ನಿತರರು ದಾಳಿ ನಡೆಸಿ ಆರೋಪಿಗಳನ್ನು
ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.