ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಹೊಸ ವರ್ಷ ಆಚರಣೆಗೆ ಸಿದ್ಧತೆ ಮಾಡುತ್ತಿದ್ದ ಆರೋಪದಲ್ಲಿ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರು ಅರಣ್ಯ ಇಲಾಖೆಯ ವಶವಾಗಿದ್ದರು ಎನ್ನಲಾಗಿದೆ.
ಆಲೆಟ್ಟಿ ಗ್ರಾಮದ ರೋಶನ್ ಕೆ.(27), ಪೆರಾಜೆಯ ಮನು (39), ಪಿ.ಜಿ. ಜೀತನ್ (21), ಸಂಪಾಜೆ ಗ್ರಾಮದ ಹರ್ಷಿತ್ ಎಚ್.ಟಿ. (38), ಮಂಡೆಕೋಲು ಗ್ರಾಮದ ನಿತಿನ್ (19), ಅಡಾRರಿನ ಸಚಿನ್ (26), ಪೆರಾಜೆ ಗ್ರಾಮದ ಸಂಜಯ್ (22), ಜಾಲ್ಸೂರು ಗ್ರಾಮದ ಶ್ರವಣ್ ಕೆ.ಜೆ., ಸುಳ್ಯದ ಸಂಪ್ರೀತ್ (29), ಆಶಿತ್ ಎ.ಎಸ್.,(28), ಕೀರ್ತನ್ ಎ.ಆರ್.(26), ಮೋಕ್ಷಿತ್ ಡಿ.ಯು. (23), ಉಪದೇಶ್ ಕೆ. (29), ದಿಶಾಲ್ ಕೆ. (26), ಪೆರಾಜೆಯ ಚಂದ್ರಶೇಖರ ಕೆ.ಆರ್., ಧನಂಜಯ ಕೆ.ಸಿ.(24), ಕಡಬದ ಸುನೀಶ್ ಜಿ. (29), ಪೆರಾಜೆಯ ಶ್ರೀಧರ ಸಿ. (32), ವಿಟ್ಲದ ಮಹೇಶ್ ನಾಯಕ್( 21), ನೆಲ್ಲೂರಿನ ಶಶಿಕಾಂತ(24), ಆಲೆಟ್ಟಿ ಗ್ರಾಮದ ಮುರಳೀಧರ್ ಪಿ.ಸಿ. (25), ಪೆರಾಜೆಯ ಜೀವಿತ್ ಕೆ.ಜಿ. (27), ಮನೋಜ್ ಸಿ.ಎನ್. (27), ಗೂನಡ್ಕದ ಪವನ್ ಕುಮಾರ್ ಜಿ. (27), ಸುಳ್ಯದ ಹರಿಶ್ಚಂದ್ರ .ಕೆ(29), ಅಲಂಕಾರು ಗ್ರಾಮದ ಶಿವಪ್ರಸಾದ(20), ಲಿಂಗಪ್ಪ ನಾಯಕ, ಜಯಪ್ರಕಾಶ್ ಜಿ. (30), ಪೆರಾಜೆಯ ಪ್ರದೀಪ್ ಪಿ.ಬಿ. (20), ದರ್ಶನ್ ಪಿ.ಪಿ. (20), ನಿತಿನ್ ಬಿ.ಪಿ. (23), ಆಕಾಶ್ (21) ಗರಗುಂಜ ಅಕ್ರಮ ಪ್ರವೇಶ ಮಾಡಿದವರು.