ಬೆಂಗಳೂರು: ಸಾಮಾಜಿಕ ಜಾಲತಾಣಇನ್‌ಸ್ಟ್ರಾಗ್ರಾಂನಲ್ಲಿ ತಮಿಳುನಾಡಿನ ರಣಜಿ ಕ್ರಿಕೆಟ್ ಆಟಗಾರ ಸತೀಶ್ ರಾಜ ಗೋಪಾಲ್ ಅವರಿಗೆ ಸ್ಪಾಟ್ ಫಿಕ್ಸಿಂಗ್‌ಗೆ 40 ಲಕ್ಷ ರೂ. ಆಮಿಷವೊಡ್ಡಿದ್ದ ಸಂಬಂಧ ನಗರದ ನಿವಾಸಿಯೊಬ್ಬರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆನ್ಸನ್‌ಟೌನ್ ನಿವಾಸಿ ಲೋಕೇಶ್ ಎಂಬುವವರು ನೀಡಿದ ದೂರಿನಮೇರೆಗೆ ಜಯನಗರ ಪೊಲೀಸರು ಬನ್ನಿ ಆನಂದ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿ, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಆರೋಪಿ ಬನ್ನಿ ಆನಂದ್‌ಜ.3ರಂದು ಇನ್‌ಸ್ಟ್ರಾಗ್ರಾಂನಲ್ಲಿ ಕ್ರಿಕೆಟಿಗ ಸತೀಶ್ ರಾಜಗೋಪಾಲ್ ಅವರನ್ನು ಸಂಪರ್ಕಿಸಿ, ಕ್ರಿಕೆಟ್ ಪಂದ್ಯದಲ್ಲಿ “ನಾನು ಹೇಳಿದಂತೆ ಆಟವಾಡಿದರೆ, ಪ್ರತಿ ಪಂದ್ಯಕ್ಕೆ 40 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾನೆ. ಈಗಾಗಲೇ ಇಬ್ಬರು ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್‌ಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ನೀವು ಒಪ್ಪಿಕೊಳ್ಳಿ’ ಎಂದು ಪ್ರಚೋದಿಸಲು ಮುಂದಾಗಿದ್ದಾನೆ.
ಆದರೆ, ಸತೀಶ್ ಬನ್ನಿ ಆನಂದ್‌ನ ಆಫರ್ ತಿರಸ್ಕರಿಸಿದ್ದರು. ಟಿಎನ್‌ಪಿಎಲ್ ಪಂದ್ಯಗಳಲ್ಲಿ ಫಿಕ್ಸಿಂಗ್ ಗೆ ಆಫರ್? ಆರೋಪಿ ಬನ್ನಿ ಆನಂದ್,ಮುಂಬರುವ ತಮಿಳುನಾಡುಪ್ರೀಮಿಯರ್ ಲೀಗ್(ಟಿಎನ್‌ಪಿಎಲ್) ಟೂರ್ನಿಯಲ್ಲಿ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವ ಸಂಬಂಧ ತಮಿಳನಾಡಿನ ರಣಜಿ ಕ್ರಿಕೆಟಿಗ ಸತೀಶ್ ರಾಜ್‌ಗೋಪಾಲ್ ಅವರನ್ನು ಸಂಪರ್ಕಿಸಿ ಆಫರ್ ನೀಡಿದ್ದ ಎಂದು ಹೇಳಲಾಗಿದೆ.
ಈ ಆಫರ್ ತಿರಸ್ಕರಿಸಿದ್ದ ಸತೀಶ್, ಕೂಡಲೇ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ದೂರು ನೀಡಿದ್ದರು. ಬನ್ನಿ ಆನಂದ್‌ನ ಇನ್‌ಸ್ಟ್ರಾಗ್ರಾಂ ಖಾತೆ ಬೆಂಗಳೂರಿನಿಂದಲೇ ನಿರ್ವಹಣೆ ಆಗುತ್ತಿರುವುದರಿಂದ ಬಿಸಿಸಿಐ ಸೂಚನೆ ಮೇರೆಗೆ ಲೋಕೇಶ್ ಎಂಬುವರುಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸತೀಶ್ ಆಲ್ ರೌಂಡರ್ :
ಆಲ್‌ರೌಂಡರ್ ಆಗಿರುವ ಕ್ರಿಕೆಟಿಗ ಸತೀಶ್ ರಾಜಗೋಪಾಲ್ ಐಪಿಎಲ್‌ನಲ್ಲಿ ಮುಂಬೈ, ಪಂಜಾಬ್ ಹಾಗೂ ಕೊಲ್ಕೊತ್ತಾ ಪರ ಆಡಿದ್ದರು. ಪ್ರಸ್ತುತತಮಿಳುನಾಡು ರಣಜಿ ತಂಡದ ಸದಸ್ಯರಾಗಿರುವ ಅವರು ಮುಂಬರುವ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಬನ್ನಿ ಆನಂದ್, ಸತೀಶ್ ಅವರನ್ನು ಸಂಪರ್ಕಿಸಿ ಸ್ಪಾಟ್ ಫಿಕ್ಸಿಂಗ್‌ಗೆ ಆಫರ್ ನೀಡಿದ್ದಾನೆ ಎಂಬುದು ಗೊತ್ತಾಗಿದೆ. ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.