Advertisement

ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

09:33 PM Nov 18, 2019 | Lakshmi GovindaRaj |

ದೇವನಹಳ್ಳಿ: ಕ್ರೀಡೆಯು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗಿದೆ ಎಂದು ಕಬ್ಬಡಿ ಕ್ರೀಡಾಪಟು ಬಿ.ಟಿ.ಲೋಕೇಶ್‌ ಹೇಳಿದರು. ತಾಲೂಕಿನ ಚಪ್ಪರಕಲ್ಲು ಬಳಿ ಇರುವ ವಿಹಾನ್‌ ಪಬ್ಲಿಕ್‌ ಶಾಲಾ ಆಟದ ಮೈದಾನದಲ್ಲಿ 5ನೇ ವರ್ಷದ ಕ್ರೀಡಾಕೂಟದಲ್ಲಿ ಮಕ್ಕಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು.

Advertisement

ಪಠ್ಯೇತರ ಚಟುವಟಿಕೆಯೂ ಅಗತ್ಯ: ಪಠ್ಯದಷ್ಟೇ ಪಠ್ಯೇತರ ಚಟುವಟಿಕೆ ಬಹಳ ಪ್ರಮುಖವಾಗಿದ್ದು, ಶಿಕ್ಷಣ ಮತ್ತು ಕ್ರೀಡೆ ಒಂದು ನಾಣ್ಯದ ಎರಡು ಮುಖ ಇದ್ದಂತೆ. ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು. ಪೋಷಕರು ಸಹ ಮಕ್ಕಳನ್ನು ಪಠ್ಯೇತರಕ್ಕೆ ಮಾತ್ರ ಸೀಮಿತಗೊಳಿಸದೆ ಕ್ರೀಡೆಯಲ್ಲಿ ಮಕ್ಕಳು ಪ್ರತಿನಿಧಿಸುವಂತೆ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

ಕ್ರೀಡೆಗೆ ಉತ್ತೇಜನ ನೀಡಿ: ಕ್ರೀಡೆಯಿಂದ ದೈಹಿಕವಾಗಿ ಆರೋಗ್ಯವಾಗಿ ಸದೃಢಗೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುವ ರೋಗಿಗಳು ಆಸ್ಪತ್ರೆಗಳಲ್ಲಿ ಸಾಲುಗಟ್ಟಿ ನಿಂತಿರುವುದು ನೋಡಿದ್ದೀರಿ. ಹೀಗೆ ಆಗಬಾರದೆಂದರೆ ಮೊದಲು ಕ್ರೀಡೆಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

ಶಾಲೆಗೆ ಕೀರ್ತಿ ತನ್ನಿ: ಪ್ರತಿ ಹಂತದಲ್ಲಿ ಮಕ್ಕಳೊಂದಿಗೆ ಸ್ನೇಹ ಸಂಬಂಧದಿಂದ ನೋಡಿಕೊಂಡರೆ ಮುಂದೊಂದು ದಿನ ಪೋಷಕರ ಹೆಸರು ಹಾಗೂ ಶಾಲೆಯ ಕೀರ್ತಿ ತರುತ್ತಾರೆ. ನಾನೊಬ್ಬ ಕಬಡ್ಡಿ ಕ್ರೀಡಾಪಟುವಾಗಿದ್ದೇನೆ. ಪ್ರೋ-ಕಬಡ್ಡಿ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಏನು ಇದ್ದಾರೆ ಅವರೆಲ್ಲಾ ಬಡಕುಟುಂಬದಿಂದ ಬಂದಂತಹವರಾಗಿದ್ದಾರೆ. ಈಗ ಕಬಡ್ಡಿ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಸಮಾಜದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಏರಿದ್ದಾರೆ ಎಂದು ಪೋಷಕರಿಗೆ ಹಾಗೂ ಮಕ್ಕಳಿಗೆ ಮಾಹಿತಿ ನೀಡಿದರು.

ಪ್ರತಿಭೆ ಹೊರಹಾಕಿ: ವಿಹಾನ್‌ ಪಬ್ಲಿಕ್‌ ಶಾಲೆ ಅಧ್ಯಕ್ಷ ಪ್ರತಾಪ್‌ಯಾದವ್‌ ಮಾತನಾಡಿ, ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಹಜವಾಗಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ 5ನೇ ವರ್ಷದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡೆಯಲ್ಲಿ ಪೋಷಕರು ಸಹ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಬಹುಮಾನವನ್ನು ಸಹ ನೀಡಲಾಗುತ್ತದೆ.

Advertisement

ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಮುಕ್ತವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಿ ಎಂದು ಸಲಹೆ ನೀಡಿದರು. ಶಾಲಾ ಉಪ ಪ್ರಾಂಶುಪಾಲೆ ಏಂಜಲೀನ್‌, ಗೌರಿಶ್‌, ದೈಹಿಕ ಶಿಕ್ಷಣ ಶಿಕ್ಷಕ ಗೌರಿಶ್‌, ಶಾಲಾ ಬೋಧಕ, ಬೋಧಕೇತರ ಸಿಬ್ಬಂಧಿವರ್ಗ, ಪೋಷಕರು, ಮಕ್ಕಳು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next