Advertisement

Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ

03:05 PM Nov 14, 2024 | Team Udayavani |

ನವದೆಹಲಿ: ಏಕಾಮ್ರ ಕ್ರೀಡಾ ಸಾಹಿತ್ಯ ಉತ್ಸವ ತನ್ನ ಆರನೇ ಆವೃತ್ತಿಯಲ್ಲಿ ಲೇಖಕರು ಮತ್ತು ಕ್ರೀಡಾಪಟುಗಳೊಂದಿಗೆ ವಿವಿಧ ಗೋಷ್ಠಿಗಳನ್ನು ಆಯೋಜಿಸಿದೆ. ಏಷ್ಯಾದಲ್ಲಿ ಇದು ಅತಿದೊಡ್ಡ ಕ್ರೀಡಾ ಸಾಹಿತ್ಯ ಕೂಟವಾಗಿದ್ದು, ನವೆಂಬರ್ 23 ರಂದು ದೆಹಲಿಯ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಈ ಉತ್ಸವ ನಡೆಯಲಿದೆ.

Advertisement

ಕ್ರೀಡಾ ಸಂಸ್ಕೃತಿ, ಉತ್ಸಾಹ ಮತ್ತು ಕ್ರೀಡಾಪಟುಗಳ ಹೋರಾಟಗಳು ಸೇರಿದಂತೆ ಹಲವಾರು ಗೋಷ್ಠಿಗಳನ್ನು ಲೇಖಕರು ಮತ್ತು ಕ್ರೀಡಾಪಟುಗಳೊಂದಿಗೆ ಆಯೋಜಿಸಲಾಗಿದೆ. ಈ ಉತ್ಸವವು ಕ್ರೀಡೆಗಳು ಯಶಸ್ವೀ ಜೀವನ ಪ್ರಯಾಣಗಳನ್ನು ರೂಪಿಸಲು ಹೇಗೆ ಸಾಂಸ್ಕೃತಿಕ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ಪುನರುಚ್ಚರಿಸುತ್ತದೆ.

ಲೇಖಕಿ, ನಿರ್ಮಾಪಕಿ ಹಾಗು ಕ್ರೀಡಾ ಲೇಖಕಿ ಸಾರಾ ಗೆರ್ಹಾರ್ಟ್ (Sarah Gearhart) ಅವರು ತಮ್ಮ ‘We Share the Sun: The Journey of Patrick Sang and Kenya’s Legendary Runners’ ಪುಸ್ತಕದ ಬಗ್ಗೆ ಕೀನ್ಯಾದಲ್ಲಿ ಪಡೆದ ಅನುಭವಗಳ ಬಗ್ಗೆ ಕುರಿತು ಈ ಉತ್ಸವದಲ್ಲಿ ಮಾತನಾಡಲಿದ್ದಾರೆ.

ಏಕಾಮ್ರ ಕ್ರೀಡಾ ಉತ್ಸವದ ಬಗ್ಗೆ ಮಾತನಾಡಿದ ನಿರ್ಮಾಪಕಿ ಹಾಗು ಕ್ರೀಡಾ ಲೇಖಕಿ ಸಾರಾ ಗೆರ್ಹಾರ್ಟ್, ನಾನು ಭಾರತಕ್ಕೆ ಬರಲು ತುಂಬಾ ಉತ್ಸುಕನಾಗಿದ್ದೇನೆ. ಇದು ಪ್ರಾಚೀನ ಸಂಸ್ಕೃತಿಯ ನಾಡು ಇಲ್ಲಿ ಪುಸ್ತಕಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ವಿಶ್ವದ ಕೆಲವು ಶ್ರೇಷ್ಠ ಲೇಖಕರು ಭಾರತದಿಂದ ಬಂದಿರುವುದು ಎಂಬುವ ಅಂಶ ಆಶ್ಚರ್ಯವೆನ್ನಲ್ಲ ಎಂದು ಹೇಳಿದ್ದಾರೆ.

ಈ ವರ್ಷದ ಎಕಮ್ರಾ ಸ್ಪೋರ್ಟ್ಸ್ ಲಿಟರೇಚರ್ ಫೆಸ್ಟಿವಲ್ ನಲ್ಲಿ ಫೇಮಸ್ ಚೆಸ್ ಚರಿತ್ರಕಾರ ‘Peter Doggers’ ಅವರ ‘The Chess Revolution’ ಪುಸ್ತಕವು ವಿಶೇಷವಾಗಿದ್ದು, ಇದು ಇತ್ತೀಚಿನ ಡಿಜಿಟಲ್ ಯುಗದಲ್ಲಿ ಕಂಡ ಏರಿಕೆ ಮತ್ತು ಜನಪ್ರಿಯ ಸಂಸ್ಕೃತಿಯ ಮೇಲೆ ಬೀರಿದ ಪರಿಣಾಮವನ್ನು ತೋರಿಸುತ್ತದೆ.

Advertisement

ಭಾರತಕ್ಕೆ ಭೇಟಿ ನೀಡುವ ಬಗ್ಗೆ ಮಾತನಾಡಿದ ಪೀಟರ್ ಡಾಜಾರ್ಸ್ (Peter Doggers) ಅವರು ತಮ್ಮ ಭಾರತ ಪ್ರವಾಸದ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಚೆಸ್ ಆಟ ಮೊದಲು ಆಡಲಾಗಿದ್ದು ಭಾರತದಲ್ಲೇ ಇದು ನನಗೆ ತೀರ್ಥಯಾತ್ರೆಯಂತಿದೆ ಎಂದು ಹೇಳಿದ್ದಾರೆ.

ಇದೇ ರೀತಿ ಭಾರತದಲ್ಲಿ ಕ್ರಿಕೆಟ್‌ನ ಅಭಿಮಾನಿಗಳತ್ತ ಆನ್‌ಲೈನ್ ಅಧಿವೇಶನಗಳು ESLF ನಲ್ಲಿ ಏರ್ಪಡಿಸಲಾಗಿದ್ದು, ಕ್ರೀಡಾ ಪುಸ್ತಕ ಪುರಸ್ಕಾರ ಸಮಾರಂಭದೊಂದಿಗೆ ಸಂಜೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next