ಜೈಪುರ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಸ್ಪೈಸ್ ಜೆಟ್ ವಿಮಾನವೊಂದರ ಟೈರ್ ಸ್ಫೋಟಗೊಂಡ ಕಾರಣ ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಅದೃಷ್ಟವಷಾತ್ ವಿಮಾನದಲ್ಲಿದ್ದ ಎಲ್ಲಾ 189 ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ.
ಎಲ್ಲಾ ತುರ್ತು ಸಿದ್ಧತೆಗಳನ್ನು ಮಾಡಿಕೊಂಡು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಯಾರೋಬ್ಬರಿಗೂ ಗಾಯಗಳಾಗಲಿಲ್ಲ ಎಂದು ತಿಳಿದು ಬಂದಿದೆ.
ಯಾವ ಕಾರಣದಿಂದಾಗಿ ಚಕ್ರ ಸ್ಫೋಟಗೊಂಡಿದೆ ಎಂದು ತಿಳಿಯಲು ವಿಮಾನದ ತಪಾಸಣೆ ನಡೆಸಲಾಗುತ್ತಿದೆ.
ವಿಮಾನಲ್ಯಾಂಡ್ ಆಗುವ ವೇಳೆ ಚಕ್ರ ಸ್ಫೋಟಗೊಂಡರೆ ಅಂತ್ಯಂತ ಅಪಾಯಕಾರಿ . ವಿಮಾನದ ಭಾರವೆಲ್ಲೂವು ಚಕ್ರಗಳ ಮೇಲಿರುವಕಾರಣ ವಿಮಾನ ಹಾರಟಕ್ಕೂ ಮುನ್ನ ಚಕ್ರಗಳು,ಲ್ಯಾಂಡಿಂಗ್ ಗಿಯರ್‌ಗಳನ್ನು ತಪಾಸಣೆ ನಡೆಸಲಾಗುತ್ತದೆ.
ಬ್ರೇಕ್ ಅಸಮರ್ಪಕ ಕಾರ್ಯ ನಿರ್ವಹಿಸುತ್ತಿದ್ದರೆ ಚಕ್ರಗಳು ಸುತ್ತುವುದಿಲ್ಲ, ಟಾರ್ಮ್ಯಾಕ್ ಮೇಲೆ ಘರ್ಷಣೆ ಉಂಟಾಗಿ ಸ್ಫೋಟಕ್ಕೆ ಕಾರಣವಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.