Advertisement

ಅಮೆರಿಕಕ್ಕೂ ನಡುಕ ಹುಟ್ಟಿಸಿದ “ಸ್ಪೆಟ್ಸ್‌ನಾಜ್‌”

06:48 PM Feb 25, 2022 | Team Udayavani |

ವಿಶ್ವದ ಐದು ದೈತ್ಯ ಮಿಲಿಟರಿ ಶಕ್ತಿಗಳಲ್ಲಿ ರಷ್ಯಾ ಕೂಡ ಒಂದು. ಆದರೆ, ಅಮೆರಿಕ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ನಿಜಕ್ಕೂ ಆತಂಕಪಡುವುದು ರಷ್ಯಾದ ಸೇನಾ ಗುಪ್ತಚರ ಪಡೆ “ಸ್ಪೆಟ್ಸ್‌ನಾಜ್‌’ಗೆ. ಯಾವುದೇ ದೇಶವಿರಲಿ, ಅದು ಎಷ್ಟೇ ಬಲಾಡ್ಯವಾಗಿರಲಿ, ಅದರ ಒಳಗುಟ್ಟುಗಳನ್ನೆಲ್ಲಾ ಬಗೆದು ತಂದು, ಸೂಕ್ತ ಷಡ್ಯಂತ್ರ ರೂಪಿಸಿ, ಆ ದೇಶದ ಮೇಲೆ ಕ್ಷಣಾರ್ಧದಲ್ಲಿ ದಾಳಿಯೆಸಗಿ ಹೊಸಕಿಹಾಕಬಲ್ಲಂಥ ಐಡಿಯಾಗಳನ್ನು ರಷ್ಯಾ ಪಡೆಗೆ ರವಾನಿಸುತ್ತದೆ. ವಿಶೇಷ ಕಾರ್ಯಾಚರಣೆಗಳಲ್ಲಿ ಮಾತ್ರ ಬಳಕೆಯಾಗುವ ಈ ಪಡೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿವೆ.

Advertisement

ಸ್ಪೆಟ್ಸ್‌ನಾಜ್‌ನ ಮಾತೃಸಂಸ್ಥೆ
ಸ್ಪೆಟ್ಸ್‌ನಾಜ್‌ ಬಗ್ಗೆ ತಿಳಿಯುವ ಮುನ್ನ ಅದರ ಮಾತೃಸಂಸ್ಥೆಯಾದ ಜಿಆರ್‌ಯು ಬಗ್ಗೆ ಮೊದಲು ತಿಳಿಯಬೇಕು. ಜಿಆರ್‌ಯು, ರಷ್ಯಾ ಸೇನೆಯ ತಜ್ಞರುಳ್ಳ ಅತಿ ಮಹತ್ವದ ವಿಭಾಗ. ಯುಎಸ್‌ಎಸ್‌ಆರ್‌ ಅಸ್ತಿತ್ವದಲ್ಲಿದ್ದಾಗ ಇದಕ್ಕೆ ಕೆಜಿಬಿ ಎಂಬ ಹೆಸರಿತ್ತು. 1991ರಲ್ಲಿ ಯುಎಸ್‌ಎಸ್‌ಆರ್‌ ಪತನಗೊಂಡ ನಂತರ, ಇದಕ್ಕೆ ಜಿಆರ್‌ಯು ಎಂದು ಮರುನಾಮಕರಣ ಮಾಡಲಾಗಿದೆ.

ಸ್ಪೆಟ್ಸ್‌ನಾಜ್‌ ಬಳಕೆ ಹೇಗೆ?
ಇದೊಂದು ಕಮ್ಯಾಂಡೋ ಪಡೆ. ಕಾರ್ಯನಿರ್ವಹಿಸುತ್ತದೆ ಸ್ಪೆಟ್ಸ್‌ನಾಜ್‌ ಪಡೆ. ಇದರಲ್ಲಿ, ಸುಮಾರು 1,200ರಿಂದ 1,500 ಮಂದಿ ಕಮ್ಯಾಂಡೋಗಳಿದ್ದಾರೆ. ಇದನ್ನು ರಷ್ಯಾ ರಕ್ಷಣಾ ಇಲಾಖೆ ನಿಯಂತ್ರಿಸುತ್ತದೆ. ಸಿರಿಯಾ ಬಿಕ್ಕಟ್ಟು ನಿವಾರಣೆ ವೇಳೆ, ಎರಡು ದಶಕಗಳ ಹಿಂದಿನ ಚೆಚೆನ್ಯಾ ಬಂಡುಕೋರರ ನಿಯಂತ್ರಣ ಇತ್ಯಾದಿ ಸಂದರ್ಭಗಳಲ್ಲಿ ಬಳಸಲಾಗಿದೆ. 2018ರಲ್ಲಿ ಸಾಸಿಲುºರಿ ನರ್ವ್‌ ಏಜೆಂಟ್‌ ಅಟ್ಯಾಕ್‌ ನಡೆಸಿದ್ದೂ ಇದೇ ವಿಭಾಗ ಎಂಬ ಗುಮಾನಿಯಿದೆ.

ಭದ್ರತೆ ಹಾಗೂ ಉಗ್ರವಾದ ನಿರ್ಮೂಲನೆ ವಿಚಾರಗಳಲ್ಲಿ ಈ ಪಡೆಗೆ ಜಗತ್ತಿನ ಅತ್ಯುನ್ನತ ತರಬೇತಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ರಷ್ಯಾ ಸಹ ಈ ಪಡೆಯನ್ನು ವಿವಿಐಪಿಗಳ ಸುರಕ್ಷತೆಗೆ ಹಾಗೂ ಬಂಡುಕೋರರನ್ನು ಹತ್ತಿಕ್ಕುವ ಕಾರ್ಯಾಚರಣೆಗಳಲ್ಲಿ ಬಳಸಿಕೊಂಡಿದೆ.

ನಿಷ್ಣಾತರು, ಚಾಣಾಕ್ಷರು!
ಇದರಲ್ಲಿ ಎರಡು ಉಪವಿಭಾಗಗಳಿವೆ. ಮೊದಲನೆಯದ್ದು “ವೆಗಾ’. ಇದರಲ್ಲಿ, ಪರಮಾಣು ಸಂಬಂಧಿಸಿದ ಸಂದಿಗ್ಧ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ನಿಷ್ಣಾತರಾಗಿದ್ದಾರೆ. ಮತ್ತೂಂದು, “ಫೇಕಲ್‌’ ಇದು, ಒತ್ತೆಯಾಳು ಪ್ರಕರಣಗಳನ್ನು ಭೇದಿಸುವಲ್ಲಿ ಚಾಣಾಕ್ಷರು.

Advertisement
Advertisement

Udayavani is now on Telegram. Click here to join our channel and stay updated with the latest news.

Next