Advertisement

ಧನ್ವೀರ್‌ ಬರ್ತ್‌ಡೇಗೆ ‘ಬೈಟುಲವ್‌’ಸ್ಪೆಷಲ್‌ ಗಿಫ್ಟ್

02:03 PM Sep 03, 2021 | Team Udayavani |

ತಮ್ಮ ಸಿನಿಮಾದ ಹೀರೋ ಬರ್ತ್‌ಡೇಗೆ ಏನಾದರೊಂದು ವಿಶೇಷ ಗಿಫ್ಟ್ ನೀಡಲು ಚಿತ್ರತಂಡ ಪ್ಲ್ರಾನ್‌ ಮಾಡಿಕೊಂಡಿರುತ್ತದೆ. ಅದು ಆಯಾ ಸಿನಿಮಾಕ್ಕೆ ಸಂಬಂಧ ಪಟ್ಟಿದ್ದಾಗಿರುತ್ತದೆ.  ಈಗ “ಬೈ ಟು ಲವ್‌’ ಚಿತ್ರತಂಡಕೂಡಾ ತಮ್ಮ ನಾಯಕ ನಟನ ಬರ್ತ್‌ಡೇಗೆ ಸರ್‌ಪ್ರೈಸ್‌ ನೀಡಲು ಸಿದ್ಧವಾಗಿದೆ.

Advertisement

ಹೌದು, “ಕೆವಿಎನ್‌ ಪ್ರೊಡಕ್ಷನ್ಸ್‌’ನಡಿ ನಿರ್ಮಾಣವಾಗುತ್ತಿರುವ “ಬೈ ಟು ಲವ್‌’ ಚಿತ್ರದಲ್ಲಿ ಧನ್ವೀರ್‌ ನಾಯಕರಾಗಿ ನಟಿಸಿದ್ದಾರೆ. ಸೆ.08 ಧನ್ವೀರ್‌ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷವಾದ ಗಿಫ್ಟ್ವೊಂದನ್ನು ನೀಡಲು ಮುಂದಾಗಿದೆ.

ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿಕಾಣಿಸಿಕೊಂಡಿರುವ ಧನ್ವೀರ್‌ ಈ ಚಿತ್ರದಲ್ಲಿ ಲವರ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಯಾಗಿರುವ ಚಿತ್ರದ ಫ‌ಸ್ಟ್‌ಲುಕ್‌ ಎಲ್ಲರ ಮೆಚ್ಚುಗೆ ಪಡೆದಿದೆ. ಸುಮಾರು70 ದಿನಗಳಿಗೂ ಹೆಚ್ಚುಕಾಲ ಚಿತ್ರೀಕರಣವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹೆಜ್ಜೆಗೊಂದು ಹೆಜ್ಜೆ: ಸ್ಟಾರ್‌ ಕಿಡ್ಸ್‌ ಸಿನಿ ಎಂಟ್ರಿ

ಈಗಾಗಲೇ ಕೆವಿಎನ್‌ ನಿರ್ಮಾಣ ಸಂಸ್ಥೆಯಡಿ “ಸಖತ್‌’, “ಬೈ ಟು ಲವ್‌’, ನಿಖೀಲ್‌ ಅಭಿನಯದ ಒಂದು ಚಿತ್ರ ಹಾಗೂ ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ನ ಸಿನಿಮಾಗಳಿವೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಇದ್ದು, ಹರಿ ಸಂತೋಷ್‌ ನಿರ್ದೇಶಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next