ಮುಂಬಯಿ: ಚಿತ್ರೀಕರಣದ ಸಂದರ್ಭದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ (Suniel Shetty) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ವರದಿಯಾಗಿದೆ.
63ರ ವಯಸ್ಸಿನಲ್ಲೂ ಸುನಿಲ್ ಶೆಟ್ಟಿ 23ರ ಹರೆಯದ ಯುವಕನಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಬರ್ದಸ್ತ್ ಬಾಡಿಬಿಲ್ಡ್ ಮಾಡಿರುವ ಸುನಿಲ್ ಶೆಟ್ಟಿ ʼಹಂಟರ್ -2ʼ ( Hunter 2) ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಸುನಿಲ್ ಶೆಟ್ಟಿ ಅವರು ತಮ್ಮ ಮುಂದಿನ ವೆಬ್ ಸಿರೀಸ್ ʼಹಂಟರ್-2ʼ ನ ಸೆಟ್ನಲ್ಲಿ ಸಾಹಸ ದೃಶ್ಯಳ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬೃಹತ್ ಮರದ ತುಂಡೊಂದು ಅವರ ಪಕ್ಕೆಲುಬಿನ ಬಂದು ಬಡಿದಿದೆ ಎಂದು ವರದಿ ತಿಳಿಸಿದೆ.
ಪರಿಣಾಮ ಚಿತ್ರೀಕರಣದ ಸ್ಥಳಕ್ಕೆ ವೈದ್ಯರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಎಕ್ಸ್-ರೇ ಯಂತ್ರವನ್ನು ತರಲಾಗಿದ್ದು ಪರೀಕ್ಷೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ʼಹಂಟರ್ʼ ಸಿರೀಸ್ ಕಳೆದ ವರ್ಷ ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸುನಿಲ್ ಶೆಟ್ಟಿ ಎಸಿಪಿ ವಿಕ್ರಂ ಆಗಿ ಕಾಣಿಸಿಕೊಂಡಿದ್ದರು. ಈ ಸರಣಿಯು ಮುಂಬೈನ ಭೂಗತ ಜಗತ್ತಿನ ಸುತ್ತ ಸಾಗುತ್ತದೆ.
ಈ ಸರಣಿಯಲ್ಲಿ ಸುನಿಲ್ ಶೆಟ್ಟಿ ಜತೆ ಇಶಾ ಡಿಯೋಲ್ ಮತ್ತು ಜಾಕಿ ಶ್ರಾಫ್, ರಾಹುಲ್ ದೇವ್, ಬರ್ಖಾ ಬಿಷ್ತ್, ಮಿಹಿರ್ ಅಹುಜಾ, ಕರಣ್ವೀರ್ ಶರ್ಮಾ, ಸಿದ್ಧಾರ್ಥ್ ಖೇರ್, ಗಾರ್ಗಿ ಸಾವಂತ್ ಮತ್ತು ಪವನ್ ಚೋಪ್ರಾ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
.ಯೂಡ್ಲೀ ಫಿಲ್ಮ್ಸ್ ನಿರ್ಮಿಸಿದ ʼಹಂಟರ್ʼ ಎಂಟು ಎಪಿಸೋಡ್ ಗಳ ಸರಣಿಯಾಗಿದ್ದು, ಧಿಮಾನ್ ಮತ್ತು ಅಲೋಕ್ ಬಾತ್ರಾ ನಿರ್ದೇಶಿಸಿದ್ದಾರೆ.