Advertisement

ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ವಿಶೇಷ ತರಗತಿ

05:40 AM Jul 22, 2017 | Team Udayavani |

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ 2017-18ನೇ ಸಾಲಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ರವಿವಾರ ಆಂಗ್ಲ ಭಾಷೆಯ ವ್ಯಾಕರಣ ಮತ್ತು ಮಾತನಾಡುವ ಕೌಶಲ ತರಬೇತಿ ನೀಡಲು ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳು ರವಿವಾರವೂ ಕಾಲೇಜಿಗೆ ಬರಬೇಕಾಗುತ್ತದೆ. ಜುಲೈ 2017ರಿಂದ ಜನವರಿ 2018ರ ತನಕ ಸುಮಾರು 28 ರವಿವಾರ ಈ ವಿಶೇಷ ತರಗತಿ ನಡೆಯಲಿದೆ. ರಾಜ್ಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದರಿಂದ ಆಂಗ್ಲ ಭಾಷಾ ಕೌಶಲ ತರಬೇತಿ ನೀಡಿ ಅವರಲ್ಲಿ ಧೈರ್ಯ ತಂಬಲು ಇಲಾಖೆ ಮುಂದಾಗಿದೆ. ಇದಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲು ಸೂಚಿಸಲಾಗಿದೆ.

Advertisement

ಇಂಗ್ಲಿಷ್‌ ಭಾಷಾ ತಜ್ಞರ ಮೂಲಕ ತರಬೇತಿ ನೀಡಬೇಕು ಮತ್ತು ತರಬೇತಿ ಹಾಜರಾಗುವ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್‌ ಮೂಲಕವೇ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಪ್ರತಿ ರವಿವಾರ ತಲಾ 90 ನಿಮಿಷ ಇಂಗ್ಲಿಷ್‌ ವ್ಯಾಕರಣಕ್ಕೆ ಹಾಗೂ ಇಂಗ್ಲಿಷ್‌ ಭಾಷಾ ಕೌಶಲ ವೃದ್ಧಿ ತರಬೇತಿಗೆ ಬಳಸುವುದು, ಪ್ರತಿ ತರಗತಿಯಲ್ಲಿ 50 ವಿದ್ಯಾರ್ಥಿಗಳಂತೆ ವೇಳಾಪಟ್ಟಿ ಸಿದ್ಧಪಡಿಸಿ, ಕಾರ್ಯಕ್ರಮದ ಯಶಸ್ಸಿನ ಹೊಣೆಗಾರಿಯನ್ನು ತಾಲೂಕು ಸಂಯೋಜಕರಿಗೆ ವಹಿಸಲಾಗಿದೆ.  ವಿದ್ಯಾರ್ಥಿಗಳು  ವಿಶೇಷ ತರಗತಿಗೆ ಬಾರದೇ ಇದ್ದರೆ ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರೇ ಹೊಣೆಗಾರರಾಗುತ್ತಾರೆ. ಯಾವುದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ವೇಳಾಪಟ್ಟಿ ಸಿದ್ಧಪಡಿಸಲು ಇಲಾಖೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next