Advertisement

ಸ್ಪೀಕರ್‌ ಪರೋಕ್ಷ ಚಾಟಿ

11:50 PM Jul 15, 2019 | Lakshmi GovindaRaj |

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ತಮ್ಮ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿ, ಹೇಳಿಕೆಗಳನ್ನು ನೀಡುತ್ತಿರುವ ಪ್ರತಿಪಕ್ಷ ನಾಯಕರು ಹಾಗೂ ಶಾಸಕರ ವಿರುದ್ಧ ಸ್ಪೀಕರ್‌ ರಮೇಶ್‌ಕುಮಾರ್‌ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Advertisement

ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ, ವಿಶ್ವಾಸಮತ ಸೋಲುತ್ತಾ? ಗೆಲ್ಲುತ್ತಾ ಎಂಬುದು ಆ ದಿನ ಗೊತ್ತಾಗಲಿದೆ. ಆದರೆ, ನನ್ನ ಕಾರ್ಯನಿರ್ವಹಣೆ ಸಂಬಂಧ ಕೆಲವರು ಬಳಸುತ್ತಿರುವ ಭಾಷೆ ಬಗ್ಗೆ ಜಾಗೃತಿ ಇರಲಿ.

ನಾನು ನಿಯಮಾವಳಿ ಬಿಟ್ಟು ಏನೂ ಮಾಡುವುದಿಲ್ಲ ಹಾಗೂ ಯಾರ ಒತ್ತಡಕ್ಕೂ ಮಣಿಯುವುದೂ ಇಲ್ಲ. ನನ್ನ ಮೇಲೆ ತಕ್ಕಡಿ ಇದೆ. ಸಂವಿಧಾನದ ಹಾಗೂ ಜನರ ಆಶಯ ಈಡೇರಿಕೆ ನನಗೆ ಮುಖ್ಯ. ಸಾಕಷ್ಟು ಜನ ತಮ್ಮ ಜೀವನ ಮುಡಿಪಾಗಿಟ್ಟು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ.

ನಾವು ಇದನ್ನು ಫ‌ುಟ್‌ಬಾಲ್‌ ಆಡುವುದು ಬೇಡ ಎಂದು ಸೂಕ್ಷ್ಮವಾಗಿ ಹೇಳಿದರು. ನಾನು ಸ್ಪೀಕರ್‌ ಆಗಿ ಅಸಹಾಯಕನಾಗಿರಬಹುದು. ಆದರೆ, ನನಗೂ ಮಾತನಾಡಲು ಬರುತ್ತದೆ. ಆದರೆ, ನಾವಿರುವ ಚೌಕಟ್ಟು ಮೀರಬಾರದು ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next