Advertisement
ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯ ಬಳಿ ಬಾಕಿಯಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ವೃತ್ತದಲ್ಲಿರುವ ಕಿರು ಉದ್ಯಾನದ ಸುತ್ತಲು ಅಳವಡಿಸಿರುವ ಕಂಬಗಳು ಹಳೆಯದಾಗಿದ್ದು, ಇನ್ನು ಕೆಲವು ಹಾಳಾಗಿವೆ. ಅದನ್ನೆಲ್ಲಾ ದುರಸ್ತಿಪಡಿಸಿ. ಅಲ್ಲದೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬೃಹತ್ ವಿದ್ಯುತ್ ಕಂಬದಲ್ಲಿರುವ ಎಲ್ಲಾ ದೀಪಗಳನ್ನು ಸರಿಪಡಿಸಲು ಸೂಚಿಸಿದ ಅವರು , ರಸ್ತೆಗೆ ಡಾಂಬರೀಕರಣ ಮಾಡಿ ಲೈನ್ ಮಾರ್ಕಿಂಗ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಓಕಳಿಪುರ ಅಷ್ಟಪಥಕಾರಿಡಾರ್ ಬಳಿ ತುಮಕೂರು ಕಡೆಗೆ ಹೋಗುವ ರೈಲ್ವೆ ಟ್ರಾಕ್ ಅಡಿ ರೈಲ್ವೆ ಇಲಾಖೆ ವತಿಯಿಂದ ಬಾಕ್ಸ್ ಪುಶಿಂಗ್ ಕಾಮಗಾರಿನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ
ಸೂಚಿಸಿದರು.
Related Articles
Advertisement
ವೈ ಜಂಕ್ಷನ್ ವಾಟಾಳ್ ನಾಗರಾಜ್ ರಸ್ತೆಯು ತುಮಕೂರು ರಸ್ತೆ ಮತ್ತು ಡಾ. ರಾಜ್‌ಕುಮಾರ್ ರಸ್ತೆಗೆ ಲಿಂಕ್ ರಸ್ತೆಯಾಗಿದ್ದು, ಇದು ಹೊರ ಪ್ರದೇಶಕ್ಕೆ ಹೋಗುವ ಪ್ರಮುಖ ರಸ್ತೆಯಾಗಿರುತ್ತದೆ. ಮೆಜೆಸ್ಟಿಕ್ ಮತ್ತು ರಾಜಾಜಿನಗರ ಕಡೆಯಿಂದ ಬರುವ ವಾಹನಗಳು ಸದರಿ ಜಂಕ್ಷನ್ ನಲ್ಲಿ ಹಾಲಿ ಸಿಗ್ನಲ್ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ವಾಹನ ದಟ್ಟಣೆಯನ್ನು ನಿವಾರಿಸಲು ವಾಟಾಳ್ ನಾಗರಾಜ್ ರಸ್ತೆ ಮತ್ತು ಮಾಗಡಿ ಡಿವೈಷನ್ ರಸ್ತೆ(ಹಳೇ ಮೈಸೂರು ರಸ್ತೆ) ವೈ ಜಂಕ್ಷನ್ ನಲ್ಲಿ ಮೆಜೆಸ್ಟಿಕ್ ಮತ್ತು ರಾಜಾಜಿನಗರ ಕಡೆ ಕೆಳಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.67 ಕಾಮಗಾರಿ ಮುಗಿದಿದೆ. ಕೆಳಸೇತುವೆ ಕಾಮಗಾರಿ ಪುರ್ಣಗೊಂಡ ಬಳಿಕ ಆ ಮಾರ್ಗದಲ್ಲಿ ವಾಹನ ಸಂಚಾರಕ್ಕೆಅನುಮಾಡಿ ಮೇಲುಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಶಿವಾನಂದ ವೃತ್ತ ಮೇಲುಸೇತುವೆ ಪರಿಶೀಲನೆ
ನಗರದ ಶಿವಾನಂದ ವೃತ್ತದಲ್ಲಿ ನಡೆಯುತ್ತಿರುವ ಮೇಲು ಸೇತುವೆ ಕಾಮಗಾರಿಯನ್ನು ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರವರು ಗುರುವಾರ ಜಂಟಿ ಪರಿಶೀಲನೆ ನಡೆಸಿದರು. ಈ ಸ್ಥಳದಲ್ಲಿ ಮೇಲುಸೇತುವೆ ಕಾಮಗಾರಿಗೆ579 ಚ.ಮೀ
ಭೂಸ್ವಾಧೀನವಾಗಬೇಕಿದ್ದು, ಅದನ್ನುಕೂಡಲೆ ಇತ್ಯರ್ಥಪಡಿಸಲು ಮುಖ್ಯ ಆಯುಕ್ತರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಇರ್ತಥ್ಯಪಡಿಸಿಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶಿವಾನಂದ ವೃತ್ತದಲ್ಲಿ ನಡೆಯುತ್ತಿ ರುವ ಮೇಲುಸೇತುವೆಯ ರ್‍ಯಾಂಪ್ ಕೆಲಸ ಹಾಗೂ ತಡೆಗೋಡೆಯ ಕಾಮಗಾರಿ ಬಾಕಿ ಯಿದ್ದು, ಭೂಸ್ವಾಧೀನ ಪಡೆಸಿಕೊಳ್ಳಬೇಕಿರುವ ಸ್ಥಳ ವನ್ನು
ತ್ವರಿತವಾಗಿ ಸ್ವಾಧೀನ ಪಡಿಸಿಕೊಂಡು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೆಂಗೇರಿ ಮೆಟ್ರೋ ಮಾರ್ಗ ಪರಿಶೀಲನೆ ಪೂರ್ಣ
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮೈಸೂರು ರಸ್ತೆ-ಕೆಂಗೇರಿ ನಡುವಿನ ವಿಸ್ತರಿಸಿದ ಮಾರ್ಗದ ಪರಿಶೀಲನೆಯನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್)ರ ತಂಡ ಗುರುವಾರ ಪೂರ್ಣಗೊಳಿಸಿದೆ. 7.53ಕಿ.ಮೀ. ಮಾರ್ಗ ಹಾಗೂ ಅದರಲ್ಲಿ ಬರುವ ಎಲ್ಲ ಆರು ನಿಲ್ದಾಣಗಳ ಭೌತಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಎರಡು ದಿನಗಳು ಸುದೀರ್ಘ ಪರಿಶೀಲನೆ ನಡೆಸಿದ ತಂಡ, ಹಲವು ಮಾಹಿತಿಗಳನ್ನು ದಾಖಲಿಸಿಕೊಂಡಿತು. ಸಿಗ್ನಲಿಂಗ್ ವ್ಯವಸ್ಥೆ, ಹಳಿ, ರೈಲುಕಾರ್ಯಾಚರಣೆ, ತುರ್ತು ನಿರ್ಗಮನ, ರೈಲು ಮತ್ತು ನಿಲ್ದಾಣಗಳಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನುಕೂಲಂಕಷವಾಗಿ ತಪಾಸಣೆ ನಡೆಸಿತು. ಮುಂದಿನ10-15 ದಿನಗಳಲ್ಲಿ ಸಿಎಂಆರ್‌ಎಸ್ ತನ್ನ ವರದಿಯೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ಕ್ಕೆ ಪ್ರತಿಕ್ರಿಯೆ ನೀಡಲಿದೆ. ಎಲ್ಲವೂ ಸರಿಯಾಗಿದ್ದರೆ, ಸಾರ್ವಜನಿಕ ಸೇವೆ ಆರಂಭಿಸಲು ಅನುಮತಿಯೂ ದೊರೆಯಲಿದೆ. ಈ ಮಧ್ಯೆ ಕೊರೊನಾ ಮೂರನೇ ಅಲೆ ಮುನ್ಸೂಚನೆ ಇದ್ದು, ರಾತ್ರಿ ಕರ್ಫ್ಯೂ ಜಾರಿ ಬಗ್ಗೆಯೂ ಚರ್ಚೆಗಳು ನಡೆದಿವೆ. ಆದ್ದರಿಂದ ಮತ್ತೆ ಕೋವಿಡ್ ಹಾವಳಿ ಶುರುವಾಗುವ
ಮುನ್ನವೇ ಕೆಂಗೇರಿ ಮಾರ್ಗವನ್ನು ಲೋಕಾರ್ಪಣೆ ಮಾಡುವ ಉದ್ದೇಶ ಇದೆ ಎನ್ನಲಾಗಿದೆ.