Advertisement

LS;11 ಅಭ್ಯರ್ಥಿಗಳ SP ಪಟ್ಟಿ ಬಿಡುಗಡೆ:ಗ್ಯಾಂಗ್‌ಸ್ಟರ್ ಮುಖ್ತಾರ್ ಸಹೋದರ ಕಣಕ್ಕೆ

05:17 PM Feb 19, 2024 | Team Udayavani |

ಲಕ್ನೋ : ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಎದುರಿಸಲು ಸಮಾಜವಾದಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸೋಮವಾರ 11 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಗ್ಯಾಜಿಪುರದಿಂದ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಯ ಸಹೋದರ ಆಫ್ಜಲ್ ಅನ್ಸಾರಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Advertisement

ಕಳೆದ ವರ್ಷ ಕ್ರಿಮಿನಲ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ ಬಳಿಕ ಅಫ್ಜಲ್ ಅನ್ಸಾರಿ ಯನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು

2007 ರ ದರೋಡೆಕೋರರ ಕಾಯಿದೆ ಪ್ರಕರಣದಲ್ಲಿ ಘಾಜಿಪುರದ ವಿಶೇಷ ನ್ಯಾಯಾಲಯವು 2023 ಎಪ್ರಿಲ್ ನಲ್ಲಿ ಅನ್ಸಾರಿ ಮತ್ತು ಅವರ ಸಹೋದರ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರನ್ನು ದೋಷಿಗಳೆಂದು ಘೋಷಿಸಿತು. ಅಫ್ಜಲ್ ಅನ್ಸಾರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದರೆ, ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ನವೆಂಬರ್ 29, 2005 ರಂದು ಆಗಿನ ಗಾಜಿಪುರದ ಬಿಜೆಪಿ ಶಾಸಕ ಕೃಷ್ಣನಾದ್ ರೈ ಅವರ ಹತ್ಯೆ ಮತ್ತು 1997 ರಲ್ಲಿ ವಾರಾಣಸಿ ಮೂಲದ ವ್ಯಾಪಾರಿ ನಂದ್ ಕಿಶೋರ್ ರುಂಗ್ಟಾ ಅವರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಸಾರಿ ಸಹೋದರರ ವಿರುದ್ಧ ಯುಪಿ ದರೋಡೆಕೋರರ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಮುಜಾಫರ್‌ನಗರದ ಹರೇಂದ್ರ ಮಲಿಕ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next