Advertisement

ವಿಶ್ವಾಸ ಮತ ನಿಲುವು ಕೇಳಿದ್ದಕ್ಕೆ ಎಸ್‌ಪಿ MP ಅಶ್ಲೀಲ ಪದಗಳ ಉತ್ತರ

03:43 PM Jul 19, 2018 | Team Udayavani |

ಹೊಸದಿಲ್ಲಿ : ಲೋಕಸಭೆಯಲ್ಲಿ ಶುಕ್ರವಾರ  ಸರಕಾರದ ವಿರುದ್ಧ ನಡೆಯುವ ವಿಶ್ವಾಸ ಮತದಲ್ಲಿ ನಿಮ್ಮ ಪಕ್ಷದ ನಿಲುವೇನು ಎಂದು ಪತ್ರಕರ್ತರು ಸಮಾಜವಾದಿ ಪಕ್ಷದ ಸಂಸದ ರಾಮ್‌ ಗೋಪಾಲ್‌ ಯಾದವ್‌ ಅವರನ್ನು ಪ್ರಶ್ನಿಸಿದಾಗ ಅವರು ತೀರ ಅಶ್ಲೀಲ ಪದಗಳನ್ನು ಬಳಸಿ ಸಿಟ್ಟಿನ ಉತ್ತರ ನೀಡಿದರು. 

Advertisement

“ನಮ್ಮ ಪಕ್ಷದ (ಎಸ್‌ಪಿ) ನಿಲುವೇನೆಂದು ನಾನು ಹೇಳುವುದಿಲ್ಲ. ನಮ್ಮ ನಿಲುವು ಏನು ಅಂತ ನಿಮಗೆ ಗೊತ್ತಾ ? ನಮ್ಮನ್ನು ನೀವು ಏನೆಂದು ತಿಳಿದಿದ್ದೀರಿ’ ಎಂದು ಯಾದವ್‌ ಗುಡುಗಿದರು. 

ವಿಶ್ವಾಸ ಮತ ಗೊತ್ತುವಳಿಯನ್ನು ತೆಲುಗು ದೇಶಂ ಪಕ್ಷ ಮಂಡಿಸಿದ್ದು  ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತಾನು ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಶ್ವಾಸ ಮತವನ್ನು ಸದನದಲ್ಲಿ ಎದುರಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next