ಲಂಡನ್: ದಕ್ಷಿಣ ಆಫ್ರಿಕಾದ ಪ್ರಸಿದ್ಧ ಲೇಖಕ ಡೇಮನ್ ಗಾಲ್ಗಟ್ ಅವರ ಕಾದಂಬರಿ “ದಿ ಪ್ರಾಮಿಸ್” ಕೃತಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ದಿ ಪ್ರಾಮಿಸ್ ದಕ್ಷಿಣ ಆಫ್ರಿಕಾದ ವರ್ಣಭೇದ ಮತ್ತು ಬಿಳಿ ಜನಾಂಗದ ಕಥಾ ಹಂದರವನ್ನು ಒಳಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡಲು ಆಟಗಾರರು ಉತ್ಸುಕರಾಗಿದ್ದಾರೆ: ರೋಹಿತ್ ಶರ್ಮಾ
ಗಾಲ್ಗಟ್ ಅವರ ದಿ ಪ್ರಾಮಿಸ್ ಕೃತಿ 50,000 ಪೌಂಡ್ ನಗದು ಬಹುಮಾನ ಮತ್ತು ಬೂಕರ್ ಪ್ರಶಸ್ತಿ ಪಡೆಯಲು ವಿಶಿಷ್ಟ ಕಥಾ ಹಂದರ ಕಾರಣವಾಗಿದೆ. ಬಡತನದ ಆಫ್ರಿಕನ್ ಕುಟುಂಬ ಮತ್ತು ಕಪ್ಪು ವರ್ಣದ ವ್ಯಕ್ತಿಗೆ ಕೆಲಸ ಕೊಡಿಸುವ ಭರವಸೆ ಈಡೇರದಿರುವ ಸೂಕ್ಷ್ಮ ಸಂವೇದನೆಯ ಕಥೆಯ ಸಾರ ಹೊಂದಿದೆ ಎಂದು ವರದಿ ವಿವರಿಸಿದೆ.
ಗಾಲ್ಗಟ್ ಅವರ ಕಾದಂಬರಿ ಮೂರನೇ ಬಾರಿ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಬಹುಮಾನ ಪಡೆದಿದೆ. ಇದಕ್ಕೂ ಮೊದಲು ಅವರು 2003ರಲ್ಲಿ ದಿ ಗುಡ್ ಡಾಕ್ಟರ್ ಮತ್ತು 2010ರಲ್ಲಿ “ಇನ್ ಎ ಸ್ಟ್ರೇಂಜ್ ರೂಮ್” ಕಾದಂಬರಿ ಶಾರ್ಟ್ ಲಿಸ್ಟ್ ಆಗಿದ್ದರೂ ಕೂಡಾ ಪ್ರಶಸ್ತಿಯಿಂದ ವಂಚಿತವಾಗಿದ್ದವು.
ಪ್ರತಿಷ್ಠಿತ ಪ್ರಶಸ್ತಿಯ ಹೊರತಾಗಿಯೂ ಗಾಲ್ಗಟ್ ಬಹುಮಾನಕ್ಕೆ ಆಯ್ಕೆಯಾಗಿರುವ ವಿಷಯ ತನ್ನನ್ನು ದಂಗು ಬಡಿಸಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಎಲ್ಲಾ ಕಥೆಗಳು ಮತ್ತು ಅಪರೂಪದ ಕೇಳಿರದ ಕಥೆಗಳು ಇದಾಗಿದೆ. ನಾನು ಕಥೆಯ ಭಾಗವಾಗಿದ್ದರಿಂದ ಪ್ರಶಸ್ತಿಯನ್ನು ಸಂತಸದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ, ಝಾಂಝಿಬಾರ್ ಮೂಲದ ಲೇಖಕ ಅಬ್ದುಲ್ ರಜಾಕ್ ಗುರ್ನಾ ಅವರು ಕೂಡಾ ಆಫ್ರಿಕ ಮೂಲದವರು ಎಂಬುದನ್ನು ಗಾಲ್ಗಟ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.