Advertisement

ದ.ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ : ತವರಲ್ಲೇ ವೆಸ್ಟ್‌ ಇಂಡೀಸಿಗೆ ಮುಖಭಂಗ

11:01 PM Jun 13, 2021 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ) : ವೆಸ್ಟ್‌ ಇಂಡೀಸ್‌ ತವರಿನ ಟೆಸ್ಟ್‌ ಪಂದ್ಯದಲ್ಲೇ ಇನ್ನಿಂಗ್ಸ್‌ ಸೋಲಿನ ಮುಖಭಂಗ ಅನುಭವಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ “ಡ್ಯಾರೆನ್‌ ಸಮ್ಮಿ ನ್ಯಾಶನಲ್‌ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಮೂರೇ ದಿನದಲ್ಲಿ ಮುಗಿದ ಟೆಸ್ಟ್‌ ಪಂದ್ಯವನ್ನು ಅದು ಇನ್ನಿಂಗ್ಸ್‌ ಹಾಗೂ 63 ರನ್ನುಗಳಿಂದ ಕಳೆದುಕೊಂಡಿದೆ.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ 97 ರನ್ನಿಗೆ ಕುಸಿಯುವ ಮೂಲಕ ಕೆರಿಬಿಯನ್ನರ ಬ್ಯಾಟಿಂಗ್‌ ಬಂಡವಾಳ ಬಯಲಾಗಿತ್ತು. ದ್ವಿತೀಯ ಸರದಿಯಲ್ಲೂ ಚೇತರಿಕೆ ಕಾಣಲಿಲ್ಲ. ಬ್ರಾತ್‌ವೇಟ್‌ ಪಡೆ 162ರ ತನಕ ಸಾಗಿ ಶರಣಾಯಿತು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 322 ರನ್‌ ಪೇರಿಸಿತ್ತು. ಶತಕವೀರ ಕ್ವಿಂಟನ್‌ ಡಿ ಕಾಕ್‌ (ಅಜೇಯ 141) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ರಬಾಡ ದಾಳಿ
ವಿಂಡೀಸ್‌ನ ದ್ವಿತೀಯ ಸರದಿಯಲ್ಲಿ ರೋಸ್ಟನ್‌ ಚೇಸ್‌ ಏಕಾಂಗಿಯಾಗಿ ಹೋರಾಡಿ 62 ರನ್‌ ಬಾರಿಸಿದರು. ಕಾಗಿಸೊ ರಬಾಡ 5, ಅನ್ರಿಚ್‌ ನೋರ್ಜೆ 3, ಮಹಾರಾಜ್‌ 2 ವಿಕೆಟ್‌ ಉರುಳಿಸಿ ಘಾತಕವಾಗಿ ಪರಿಣಮಿಸಿದರು.

2ನೇ ಹಾಗೂ ಅಂತಿಮ ಟೆಸ್ಟ್‌ ಇದೇ ಅಂಗಳದಲ್ಲಿ ಜೂ. 18ರಂದು ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌-97 ಮತ್ತು 162 (ಚೇಸ್‌ 62, ರಬಾಡ 34ಕ್ಕೆ 5, ನೋರ್ಜೆ 46ಕ್ಕೆ 3, ಮಹಾರಾಜ್‌ 23ಕ್ಕೆ 2).

Advertisement

ಪಂದ್ಯಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

Advertisement

Udayavani is now on Telegram. Click here to join our channel and stay updated with the latest news.

Next