Advertisement

ವೆಲ್ಲಿಂಗ್ಟನ್‌ ಟೆಸ್ಟ್‌: ದ. ಆಫ್ರಿಕಾ ಜಯಭೇರಿ

12:27 PM Mar 19, 2017 | Team Udayavani |

ವೆಲ್ಲಿಂಗ್ಟನ್‌: ಕೇಶವ್‌ ಮಹಾರಾಜ್‌ ಅವರ ಜೀವನಶ್ರೇಷ್ಠ ನಿರ್ವಹಣೆಯಿಂದಾಗಿ ಪ್ರವಾಸಿ ದಕ್ಷಿಣ ಆಫ್ರಿಕಾವು ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 8 ವಿಕೆಟ್‌ಗಳ ಜಯಭೇರಿ ಬಾರಿಸಿದೆ.

Advertisement

ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಡ್ರಾಗೊಂಡಿದ್ದರೆ ಸರಣಿ ನಿರ್ಣಾಯಕ ಪಂದ್ಯ ಮಾ. 25ರಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ. 

ದ್ವಿತೀಯ ದಿನದ ಆಟದ ವೇಳೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿ ಸಿದ್ದ ದಕ್ಷಿಣ ಆಫ್ರಿಕಾವು ಮೂರನೇ ದಿನ ಮತ್ತೆ 10 ರನ್‌ ಪೇರಿಸಿ ಅಂತಿಮ ವಿಕೆಟನ್ನು ಕಳೆದುಕೊಂಡು 359 ರನ್ನಿಗೆ ಆಲೌಟಾಯಿತು. ಇದರಿಂದಾಗಿ ದಕ್ಷಿಣ ಆಫ್ರಿಕಾ 91 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿತು.

ನ್ಯೂಜಿಲ್ಯಾಂಡ್‌ ಕುಸಿತ
ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆಗೆ ಒಳಗಾದ ನ್ಯೂಜಿ ಲ್ಯಾಂಡ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿತು. ಆರಂಭಿಕ ಜೀತ್‌ ರಾವಲ್‌ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಹರಿಣಗಳ ದಾಳಿಯನ್ನು ಎದುರಿಸಲು ಅಸಮರ್ಥರಾದರು. ಒಂದು ಕಡೆ ಯಿಂದ ವಿಕೆಟ್‌ ಉರುಳುತ್ತಿದ್ದರೂ ರಾವಲ್‌ ತಾಳ್ಮೆಯ ಆಟವಾಡಿದರು. ಆರನೆಯವರಾಗಿ ಔಟಾಗುವ ಮೊದಲು 174 ಎಸೆತ ಎದುರಿಸಿದ ಅವರು 10 ಬೌಂಡರಿ ನೆರವಿನಿಂದ 80 ರನ್‌ ಹೊಡೆದರು.

ರಾವಲ್‌ ಅವರನ್ನು ಹೊರತು ಪಡಿಸಿದರೆ ನೀಲ್‌ ಬ್ರೂಮ್‌ ಮತ್ತು ವಾಟಿÉಂಗ್‌ ಮಾತ್ರ ಎರಡಂಕೆಯ ಮೊತ್ತ ತಲುಪಿದ್ದರು. 90 ರನ್ನಿಗೆ 5 ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್‌ ಕೊನೆಯ ಐದು ವಿಕೆಟನ್ನು 16 ರನ್‌ ಮತ್ತು 36 ಎಸೆತಗಳ ಅಂತರದಲ್ಲಿ ಕಳೆದು ಕೊಂಡು 171 ರನ್ನಿಗೆ ಸರ್ವಪತನ ಕಂಡಿತು.  ಮಾರ್ನೆ ಮಾರ್ಕೆಲ್‌ ಮೂರು ವಿಕೆಟ್‌ ಉರುಳಿಸಿದರೆ ಕೇಶವ್‌ ಮಹಾರಾಜ್‌ 40 ರನ್ನಿಗೆ 6 ವಿಕೆಟ್‌ ಕಿತ್ತು ಗಮನ ಸೆಳೆದರು. ಇದು ಅವರ ಬಾಳ್ವೆಯ ಶ್ರೇಷ್ಠ ನಿರ್ವಹಣೆಯಾಗಿದೆ. 

Advertisement

81 ರನ್‌ ಗುರಿ
ಗೆಲ್ಲಲು 81 ರನ್‌ ಗಳಿಸುವ ಗುರಿ ಪಡೆದ ದಕ್ಷಿಣ ಆಫ್ರಿಕಾ 3ನೇ ದಿನವೇ 2 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಹಾಶಿಮ್‌ ಆಮ್ಲ 38 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್‌ 268 ಮತ್ತು 171 (ಜೀತ್‌ ರಾವಲ್‌ 80, ನೀಲ್‌ ಬ್ರೂಮ್‌ 20, ವಾಟಿÉಂಗ್‌ 29, ಮಾರ್ನೆ ಮಾರ್ಕೆಲ್‌ 50ಕ್ಕೆ 3, ಕೇಶವ್‌ ಮಹಾರಾಜ್‌ 40ಕ್ಕೆ 6); ದಕ್ಷಿಣ ಆಫ್ರಿಕಾ 359 ಮತ್ತು 2 ವಿಕೆಟಿಗೆ 83 (ಹಾಶಿಮ್‌ ಆಮ್ಲ 38 ಔಟಾಗದೆ).

Advertisement

Udayavani is now on Telegram. Click here to join our channel and stay updated with the latest news.

Next