Advertisement
3 ಪಂದ್ಯಗಳ ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡಿದೆ. 2021ರ ಬಳಿಕ ತವರಲ್ಲಿ ಪಾಕಿಸ್ತಾನ ಗೆದ್ದ ಮೊದಲ ಸರಣಿ ಜಯ! ಅಂದು ದ.ಆಫ್ರಿಕಾವನ್ನು 2-0ಯಿಂದ ಮಣಿಸಿತ್ತು. 1ನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 267ಕ್ಕೆ ಆಲೌಟಾಗಿತ್ತು. ಪಾಕಿಸ್ತಾನ 1ನೇ ಇನಿಂಗ್ಸ್‌ನಲ್ಲಿ 344 ರನ್ ಗಳಿಸಿತ್ತು. 2ನೇ ಇನಿಂಗ್ಸ್‌ನಲ್ಲಿ 112ಕ್ಕೆ ಆಲೌಟಾಗಿತ್ತು. ಇದು ಪಾಕಿಸ್ತಾನಲ್ಲಿ ಇಂಗ್ಲೆಂಡ್ ದಾಖಲಿಸಿದ ಕನಿಷ್ಠ ಸ್ಕೋರ್. ಕೇವಲ 36 ರನ್ ಗುರಿ ಪಡೆದಿದ್ದ ಪಾಕಿಸ್ತಾನ 1 ವಿಕೆಟ್‌ಗೆ 37 ರನ್ ಗಳಿಸಿ, 9 ವಿಕೆಟ್ ಜಯ ಸಾಧಿಸಿತು.
Related Articles
Advertisement
ಸ್ಪಿನ್‌ದ್ವಯರಾದ ಸಾಜಿದ್ ಖಾನ್ ಮತ್ತು ನೊಮಾನ್ ಅಲಿ ಸೇರಿಕೊಂಡು ಇಂಗ್ಲೆಂಡ್ ಕತೆ ಮುಗಿಸಿದರು. ಇವರಿಬ್ಬರು 19 ವಿಕೆಟ್ ಉಡಾಯಿಸಿ ಆಂಗ್ಲರಿಗೆ ಎದ್ದು ನಿಲ್ಲಲಾಗದಂತೆ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕೆಡವಿದ್ದ ಸಾಜಿದ್ ಅಲಿ, ದ್ವಿತೀಯ ಸರದಿಯಲ್ಲಿ 4 ವಿಕೆಟ್ ಉರುಳಿಸಿದರು. ನೊಮಾನ್ ಅಲಿ 88ಕ್ಕೆ 3 ಹಾಗೂ 42ಕ್ಕೆ 6 ವಿಕೆಟ್ ಕಿತ್ತು ಮೆರೆದರು.
ಇಂಗ್ಲೆಂಡ್‌ನ ದ್ವಿತೀಯ ಸರದಿಯಲ್ಲಿ ಜೋ ರೂಟ್ 33, ಹ್ಯಾರಿ ಬ್ರೂಕ್ 26 ರನ್ ಮಾಡಿದರು. ಒಂದು ಹಂತದಲ್ಲಿ 3ಕ್ಕೆ 66 ರನ್ ಮಾಡಿದ್ದ ಇಂಗ್ಲೆಂಡ್, ಕೇವಲ 46 ರನ್ ಅಂತರದಲ್ಲಿ ಉಳಿದ ಆರೂ ವಿಕೆಟ್ ಉದುರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-267 ಮತ್ತು 112 (ರೂಟ್ 33, ಬ್ರೂಕ್ 26, ನೊಮಾನ್ 42ಕ್ಕೆ 6, ಸಾಜಿದ್ 69ಕ್ಕೆ 4). ಪಾಕಿಸ್ತಾನ-344 ಮತ್ತು ಒಂದು ವಿಕೆಟಿಗೆ 37 (ಮಸೂದ್ ಔಟಾಗದೆ 23).
ಪಂದ್ಯಶ್ರೇಷ್ಠ: ಸೌದ್ ಶಕೀಲ್. ಸರಣಿಶ್ರೇಷ್ಠ: ಸಾಜಿದ್ ಖಾನ್.