Advertisement

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

03:18 PM Nov 15, 2024 | Team Udayavani |

ವೆಲ್ಲಿಂಗ್ಟನ್:‌ ಈ ವರ್ಷಾಂತ್ಯದ ಕೊನೆಯಲ್ಲಿ ನಡೆಯುವ ಇಂಗ್ಲೆಂಡ್‌ (England) ವಿರುದ್ದ ಟೆಸ್ಟ್‌ ಬಳಿಕ ನ್ಯೂಜಿಲ್ಯಾಂಡ್‌ (New Zealand) ತಂಡದ ಘಾತಕ ವೇಗಿ ಟಿಮ್ ಸೌಥಿ (Tim Southee) ಅವರು ಟೆಸ್ಟ್‌ ಕ್ರಿಕೆಟ್‌ ನಿಂದ ವಿದಾಯ ಹೇಳಲಿದ್ದಾರೆ.

Advertisement

ಈ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ ನಲ್ಲಿ ತಮ್ಮ ತವರು ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೊಂದಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ನ್ಯೂಜಿಲ್ಯಾಂಡ್‌ ಪರ ಅತಿ ಹೆಚ್ಚು ವಿಕೆಟ್‌ ಗಳನ್ನು ಪಡೆದಿರುವ ಸೌಥಿ ಅವರು ಮುಂದಿನ ಜೂನ್‌ ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ ಗೆ ತಂಡ ಅರ್ಹತೆ ಪಡೆದರೆ ಆಡಲು ಲಭ್ಯವಾಗುತ್ತಾರೆ.

“ನ್ಯೂಜಿಲ್ಯಾಂಡ್ ತಂಡವನ್ನು ಪ್ರತಿನಿಧಿಸುವುದು ನನ್ನ ಕನಸಾಗಿತ್ತು” ಎಂದು ಸೌಥಿ ಹೇಳಿದರು. “18 ವರ್ಷಗಳ ಕಾಲ ಬ್ಲ್ಯಾಕ್‌ಕ್ಯಾಪ್ಸ್‌ ಗಾಗಿ ಆಡುವುದು ದೊಡ್ಡ ಗೌರವ. ಆದರೆ ನನಗೆ ತುಂಬಾ ನೀಡಿದ ಆಟದಿಂದ ಹಿಂದೆ ಸರಿಯುವ ಸಮಯ ಬಂದಿದೆ” ಎಂದು ಸೌಥಿ ಹೇಳಿದರು.

2008ರ ಅಂಡರ್‌ 19 ವಿಶ್ವಕಪ್ ನಲ್ಲಿ 17 ವಿಕೆಟ್‌ ಪಡೆಯುವ ಮೂಲಕ ಸೌಥಿ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ನಾಲ್ಕು ಏಕದಿನ ವಿಶ್ವಕಪ್‌, ಏಳು ಟಿ20 ವಿಶ್ವಕಪ್‌, ಎರಡು ಚಾಂಪಿಯನ್ಸ್‌ ಟ್ರೋಫಿ ಮತ್ತು ಒಮ್ಮೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಆಡಿದ್ದರು.

Advertisement

ನ್ಯೂಜಿಲ್ಯಾಂಡ್‌ ಪರ ರೆಡ್-ಬಾಲ್ ಕ್ರಿಕೆಟ್‌ ನಲ್ಲಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಸೌಥಿ ಇಲ್ಲಿಯವರೆಗೆ 104 ಪಂದ್ಯಗಳಲ್ಲಿ 385 ಟೆಸ್ಟ್ ವಿಕೆಟ್‌ ಗಳನ್ನು ಪಡೆದಿದ್ದಾರೆ. 300 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ ಏಕದಿನ ದಲ್ಲಿ 200 ಮತ್ತು ಟಿ20ಐ ಗಳಲ್ಲಿ 100 ವಿಕೆಟ್‌ ಗಳನ್ನು ಪಡೆದ ವಿಶ್ವದ ಏಕೈಕ ಆಟಗಾರ ಟಿಮ್‌ ಸೌಥಿ.

Advertisement

Udayavani is now on Telegram. Click here to join our channel and stay updated with the latest news.

Next