Advertisement

ಮರಡೋನಾ-ಗಂಗೂಲಿ ಫ‌ುಟ್‌ಬಾಲ್‌

06:40 AM Oct 05, 2017 | |

ಕೋಲ್ಕತಾ: ವಿಶ್ವ ವಿಖ್ಯಾತ ಫ‌ುಟ್ಬಾಲಿಗ ಡೀಗೊ ಮರಡೋನಾ ಅ. 9ರಂದು ಭಾರತದ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ವಿರುದ್ಧ ಕೋಲ್ಕತಾದಲ್ಲಿ ಫ‌ುಟ್‌ಬಾಲ್‌ ಪಂದ್ಯವೊಂದರಲ್ಲಿ ಆಡಲಿದ್ದಾರೆ. ಕಿರಿಯರ ವಿಶ್ವಕಪ್‌ ನಿಮಿತ್ತ ಮರಡೋನಾ ಭಾರತಕ್ಕೆ ಆಗಮಿಸುತ್ತಿದ್ದು, ಈ ವೇಳೆ ಗಂಗೂಲಿ ತಂಡದ ವಿರುದ್ಧ ಸೌಹಾರ್ದ ಫ‌ುಟ್‌ಬಾಲ್‌ ಪಂದ್ಯ ನಡೆಯಲಿದೆ.

Advertisement

ಕೋಲ್ಕತಾದ ಆದಿತ್ಯ ಸ್ಕೂಲ್‌ ಆಫ್ ನ್ಪೋರ್ಟ್ಸ್ ಕ್ರೀಡಾಂಗಣ ಮಧ್ಯಾಹ್ನ 2.30ಕ್ಕೆ ಪಂದ್ಯ ನಡೆಯಲಿದೆ. ಗಂಗೂಲಿ ತಂಡದ ಹೆಸರು “ದಾದಾ’ ಹಾಗೂ ಮರಡೋನಾ ತಂಡದ ಹೆಸರು “ಡೀಗೊ’ ಎಂದಾಗಿದ್ದು, ಅಭಿಮಾನಿಗಳಿಗೆ ಭಾರೀ ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next