Advertisement

Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್‌ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ನತ್ತ..

04:15 PM Oct 06, 2024 | Team Udayavani |

“ನಿದ್ರಾದೇವಿ ನೆಕ್ಸ್ಟ್ ಡೋರ್‌’ ಎಂಬ ಸಿನಿಮಾ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿದೆ. ಸುರಮ್‌ ಮೂವಿಸ್‌ ಲಾಂಛನದಡಿ ಈ ಹಿಂದೆ “ರೇವ್‌ ಪಾರ್ಟಿ’, “ಎಂಗೆಜ್‌ಮೆಂಟ್‌’ ಚಿತ್ರಗಳನ್ನು ನಿರ್ಮಿಸಿದ್ದ ಜಯರಾಮ್‌ ದೇವಸಮುದ್ರ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

Advertisement

ಸಿನಿಮಾ ನಿರ್ದೇಶಕ ಸುರಾಗ್‌ ಸಾಗರ್‌ ಚಿತ್ರದ ಕುರಿತು ಮಾತನಾಡುತ್ತ, “ಸದ್ಯ ಚಿತ್ರೀಕರಣ ಭಾಗ ಮುಕ್ತಾಯವಾಗಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿವೆ. ಬೆಂಗಳೂರಿನ ಎಚ್‌ಎಂಟಿ ಸೆಟ್‌ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಚಿತ್ರ ಅದ್ಬುತವಾಗಿ ಮೂಡಿಬರಲಿದೆ ಎಂಬ ವಿಶ್ವಾಸವಿದೆ’ ಎಂದರು.

ಚಿತ್ರದಲ್ಲಿ ಪ್ರವೀರ್‌ ಶೆಟ್ಟಿ ಹಾಗೂ ರಿಷಿಕಾ ನಾಯಕ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಹಾಗೂ ಶ್ರುತಿ ಹರಿಹರನ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ವಿಶೇಷ.

ಉಳಿದಂತೆ ಸುಧಾರಾಣಿ, ಶ್ರೀವತ್ಸ, ಐಶ್ವರ್ಯ ಗೌಡ, ಅನೂಪ್‌, ಮಾಸ್ಟರ್‌ ಸುಜಯ್‌ ರಾಮ್, ಕಾರ್ತಿಕ್‌ ಪತ್ತಾರ್‌, ಅನುರಾಗ್‌ ಪಾಟೀಲ್‌ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next