Advertisement

ಕಾಡಿನೊಳಗೆ ಹೊಸಬರ ಸದ್ದು

06:00 AM May 04, 2018 | Team Udayavani |

“ಸದ್ದು’ ಎಂಬ ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಈ ಚಿತ್ರವನ್ನು ಅರುಣ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಾಡು ಪ್ರಾಣಿಗಳನ್ನು ಸಂರಕ್ಷಿಸಿ, ಪ್ರಕೃತಿ ಉಳಿಸಿ ಎಂಬ ಸಂದೇಶ ನೀಡಿದ್ದಾರಂತೆ. ನಿರ್ದೇಶಕರು ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರಂತೆ. ಮನುಷ್ಯ ಕಾಡಿನಲ್ಲಿ ಬಿಸಾಕುವ ಪ್ಲಾಸ್ಟಿಕ್‌ ಬಾಟಲಿ ಸೇರಿದಂತೆ ಇತರ ಅಂಶಗಳಿಂದ ಕಾಡು ಪ್ರಾಣಿಗಳಿಗೆ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಚಿತ್ರದ ಟೈಟಲ್‌ ಕಥೆಗೆ ಹೊಂದಿಕೆಯಾಗಿದ್ದು, ನಗರದಲ್ಲಿರುವ ಸದ್ದು ಕಾಡಿನಲ್ಲಿರೋದಿಲ್ಲ ಎಂಬ ಅಂಶವೂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ. 

Advertisement

ಚಿತ್ರದಲ್ಲಿ ಹಾರರ್‌ಗೆ ಹೆಚ್ಚು ಅವಕಾಶ ಕೊಡದೇ, ಆ್ಯಕ್ಷನ್‌, ಥ್ರಿಲ್ಲರ್‌ ಹಾಗೂ ಲವ್‌ಸ್ಟೋರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆಯಂತೆ. ಚಿತ್ರದಲ್ಲಿ ಕಾಡಿನ ಸೌಂದರ್ಯವನ್ನು ಸವಿಯಬಹುದು ಎಂಬುದು ಚಿತ್ರತಂಡದ ಮಾತು. ಕರಾವಳಿಯ ಭೂತಾರಾಧನೆಯ ಅಂಶಗಳು ಕೂಡಾ ಚಿತ್ರದಲ್ಲಿ ಬಂದು ಹೋಗಲಿವೆಯಂತೆ. ಚಿತ್ರದಲ್ಲಿ ನಿಖೀತಾ ನಾಯಕಿಯಾಗಿ ನಟಿಸಿದ್ದಾರೆ. ಇಲ್ಲ ಅವರು ವೈಲ್ಡ್‌ಲೈಫ್ ಫೋಟೋಗ್ರಾಫ‌ರ್‌ ಆಗಿ ನಟಿಸಿದ್ದು, ಕಾಡಿನಲ್ಲಿ ಫೋಟೋ ತೆಗೆಯುವ ವೇಳೆ ಏನೆಲ್ಲಾ ತೊಂದರೆ ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ಜೊತೆಗೆ ಕಾಡಿನೊಳಗೆ ಬಂದು ಮೋಜು-ಮಸ್ತಿ ಮಾಡುವುದರಿಂದ ಅಲ್ಲಿನ ಪ್ರಾಣಿ ಪಕ್ಷಿಗಳು ಎಷ್ಟು ತೊಂದರೆ ಅನುಭವಿಸುತ್ತವೆ ಎಂಬುದರ ಬಗ್ಗೆಯೂ ಇಲ್ಲಿ ಬೆಳಕು ಚೆಲ್ಲಿದ್ದಾರಂತೆ.

 ಉಳಿದಂತೆ ಚಿತ್ರದಲ್ಲಿ ಭಾಗ್ಯ, ಅಶ್ರಿತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ವಚನ್‌ ಶೆಟ್ಟಿ ಹಾಗೂ ಕೃಷ್ಣ ಚೈತನ್ಯ ಸೇರಿ ನಿರ್ಮಿಸಿದ್ದಾರೆ. ವಚನ್‌ ಶೆಟ್ಟಿಯವರಿಗೆ ಕಾಡಿನ ಕಥೆ ತುಂಬಾ ಥ್ರಿಲ್‌ ಅನಿಸಿದ್ದು, ಇಲ್ಲಿ ಹಾರರ್‌ಗಿಂತ ಥ್ರಿಲ್ಲರ್‌ ಅಂಶಗಳು ಹೆಚ್ಚು ಗಮನ ಸೆಳೆಯಲಿವೆ ಎಂಬುದು ಅವರ ಮಾತು.ಚಿತ್ರಕ್ಕೆ ವೈಭವ್‌ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next